
ಬೆಂಗಳೂರು.ಸೆ6: ಒಂದು ಸಾವಿರ ಮಕ್ಕಳು, ಒಂದು ಸಾವಿರ ಕುಟುಂಬಗಳು ಮತ್ತು ಒಂದು ಸಾವಿರ ಹೊಸ ಆರಂಭಗಳು: ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳ ಸ್ಟೆಮ್ ಸೆಲ್ ಟ್ರಾನ್ಸ್‍ಪ್ಲಾಂಟೇಶನ್ (ಕಾಂಡಕೋಶ ಕಸಿ) ಪೂರ್ಣಗೊಳಿಸುವ ಮೂಲಕ ಅಪರೂಪದ ಮೈಲಿಗಲ್ಲನ್ನು ಸಾಧಿಸಿದೆ.
ಒಂದು ಸಾವಿರ ಟ್ರಾನ್ಸ್‍ಪ್ಲಾಂಟ್‍ಗಳು ದೀರ್ಘಕಾಲೀನ ಸಹಭಾಗಿತ್ವವು ಏನು ಸಾಧಿಸಬಲ್ಲದು ಎಂಬುದನ್ನು ತೋರಿಸುತ್ತವೆ. ಸಂಕಲ್ಪ ಸಂಸ್ಥೆಯು ಅದ್ಭುತವಾದ ಸ್ಥಳೀಯ ನೈಪುಣ್ಯತೆ ಮತ್ತು ಬದ್ಧತೆಯನ್ನು ತಂದರೆ, ಕ್ಯೂರ್2ಚಿಲ್ಡ್ರನ್ ಪ್ರಮುಖ ವೈದ್ಯಕೀಯ ಜ್ಞಾನವನ್ನು ನೀಡುತ್ತದೆ. ನಾವು ಒಟ್ಟಾಗಿ ಹೆಚ್ಚಿನ ಮಕ್ಕಳಿಗೆ ಗುಣಮುಖರಾಗುವ ಅವಕಾಶವನ್ನು ನಿಜವಾಗಿಸಲು ನೆರವಾಗುತ್ತಿದ್ದೇವೆ. ನಾವು ಕಟ್ಟಲು ಬಯಸುವ ಸುಸ್ಥಿರ ಸಹಯೋಗ ಇದೇ ಆಗಿದೆ: ದೇಶದಲ್ಲಿಯೇ, ದೇಶಕ್ಕಾಗಿ,” ಎಂದು ಆಏಒS ಜಾಗತಿಕ ಸಿಇಒ ಡಾ. ಎಲ್ಕೆ ನೊಯ್ಜಾರ್ ಹೇಳಿದ್ದಾರೆ.
ರಜತ್ ಕುಮಾರ್ ಅಗರ್ವಾಲ್, ಅಧ್ಯಕ್ಷರು, ಸಂಕಲ್ಪ ಭಾರತ ಫೌಂಡೇಶನ್ ಮಾತನಾಡಿ“ನಾವು ಈ ಮೈಲಿಗಲ್ಲನ್ನು ‘1,000 ಹೊಸ ಆರಂಭಗಳು’ ಎಂದು ಕರೆಯುತ್ತೇವೆ. ಏಕೆಂದರೆ ಪ್ರತಿಯೊಂದು ಮಗು ಮತ್ತು ಕುಟುಂಬಕ್ಕೆ ಈ ಟ್ರಾನ್ಸ್‍ಪ್ಲಾಂಟೇಶನ್ ಸಂಪೂರ್ಣ ಭಿನ್ನವಾದ ಮತ್ತು ಉಜ್ವಲ ಭವಿಷ್ಯದ ಆರಂಭವಾಗಬಹುದು. ನಮ್ಮ ಗುರಿ ಕೇವಲ ಪ್ರತ್ಯೇಕ ಟ್ರಾನ್ಸ್‍ಪ್ಲಾಂಟ್‍ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ರೋಗ ತಡೆಗಟ್ಟುವಿಕೆ, ಸಮಗ್ರ ತಲಸೇಮಿಯಾ ಆರೈಕೆ, ದಾನಿಗಳ ಗುರುತಿಸುವಿಕೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒಂದಕ್ಕೊಂದು ಜೋಡಿಸುವುದು ನಮ್ಮ ಆಶಯವಾಗಿದೆ ಎಂದರು. ಡಾ. ಲಾರೆನ್ಸ್ ಫಾಕ್ನರ್, ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರು ಮಾತನಾಡಿ,ಶಿಕ್ಷಿತ ತಂಡಗಳು, ದೃಢವಾದ ಗುಣಮಟ್ಟದ ವ್ಯವಸ್ಥೆಗಳು ಮತ್ತು ಸಂಕೀರ್ಣ ಚಿಕಿತ್ಸೆಯನ್ನು ವಿಶ್ವಾಸಾರ್ಹವಾಗಿ ಹಾಗೂ ಸುಸ್ಥಿರವಾಗಿ ನೀಡುವ ಸಾಮಥ್ರ್ಯದ ಅಗತ್ಯವಿದೆ ಎಂದರು.
ಪ್ಯಾಟ್ರಿಕ್ ಪೌಲ್, ಎಕ್ಸೆಕ್ಯೂಟಿವ್ ಚೇರ್ಮನ್, ಡಿಕೆಎಂಎಸ್ ಫೌಂಡೇಶನ್ ಇಂಡಿಯಾತಲಸೇಮಿಯಾ ಇರುವ ಮಗುವಿಗೆ ಸೂಕ್ತವಾದ ದಾನಿಯನ್ನು ಹುಡುಕುವುದು ಗುಣಮುಖರಾಗುವತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು.
































