
ಬೆಂಗಳೂರು, ಆ. 18- ಜಾನಪದ ತಜ್ಞೆ ಹಾಗೂ ಸಂಶೋಧಕಿ ಡಾ. ಗೀತಾ ಉಡುಪಿ ಬಡಿಕಿಲಾಯ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಡೆಸ್ಟಿನೇಶನ್ ಹೆರಿಟೇಜ್, ಕರ್ನಾಟಕದ ಜೀವಂತ ಜಾನಪದ ಪರಂಪರೆಯನ್ನು ಸಂಭ್ರಮಿಸುವ ರೂಟ್ಸ್ & ರಿದಮ್ಸ್ ಎ ಸೆಲೆಬ್ರೇಷನ್ ಆಫ್ ಕರ್ನಾಟಕ್ಸ್ ಲಿವಿಂಗ್ ಫೆÇೀಕ್ ಟ್ರಡಿಷನ್ಸ್' ಕಾರ್ಯಕ್ರಮವನ್ನು ಆಗಸ್ಟ್ 23, 2026ರಂದು ಆಯೋಜಿಸಿದೆ. ಬೆಂಗಳೂರಿನ ಸುಧಾಮನಗರದಲ್ಲಿರುವ ಕೆ.ಎಚ್. ಪಾಟೀಲ್ ಆಡಿಟೋರಿಯಂ, 142, ಕೆ.ಎಚ್. ರಸ್ತೆ, ರಿಚ್ಮಂಡ್ ರೋಡ್ ಫ್ಲೈಓವರ್ ಸಮೀಪದಲ್ಲಿ ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದೆ. ಡೆಸ್ಟಿನೇಶನ್ ಹೆರಿಟೇಜ್ನ ದಶಮಾನೋತ್ಸವ ಹಾಗೂ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಉತ್ಸವವು ಕಲಾವಿದರು ಹಾಗೂ ಸಮುದಾಯಗಳನ್ನು ಒಂದೆಡೆ ಸೇರಿಸಿ ಕರ್ನಾಟಕದ ಶ್ರೀಮಂತ ಜಾನಪದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲಿದೆ. ಒಂದು ದಿನದ ಈ ಜಾನಪದ ಉತ್ಸವದಲ್ಲಿ ಕರ್ನಾಟಕದ ವೈವಿಧ್ಯಮಯ ಜಾನಪದ ಸಾಂಸ್ಕೃತಿಕ ಪರಂಪರೆಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಾಗುತ್ತದೆ. ಸಾಂಪ್ರದಾಯಿಕ ಜಾನಪದ ಪ್ರದರ್ಶನಗಳು, ರಂಗಭೂಮಿ, ಸಂಗೀತ, ಗೊಂಬೆಯಾಟ ಹಾಗೂ ಕಥೆ ಹೇಳುವ ಪರಂಪರೆಗಳು ಇಲ್ಲಿ ಮೂಡಿಬರಲಿವೆ. ನುರಿತ ಕಲಾವಿದರು ಹಾಗೂ ಸಾಂಪ್ರದಾಯಿಕ ಪ್ರದರ್ಶನ ತಂಡಗಳ ನೇರ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಜಾನಪದ ಪರಂಪರೆಗಳನ್ನು ಅನುಭವಿಸುವ ಅವಕಾಶ ದೊರೆಯಲಿದೆ. ಉತ್ಸವದಲ್ಲಿ ಕರ್ನಾಟಕದ ಜಾನಪದ ಪ್ರದರ್ಶನ ಕಲೆಗಳು ಪ್ರಮುಖವಾಗಿ ಮೂಡಿಬರಲಿವೆ. ಶ್ರೀ ಶಶಿಧರ್ ಕೋಟೆ ಅವರ ಜಾನಪದ ಗೀತೆಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ನಂತರ ಹೊಸೂರಿನ ಶ್ರೀ ಸಂತೋಷ್ ನಾಯಕ್ ಮತ್ತು ತಂಡಸುಧನ್ವಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಶ್ರೀ ರವೀಂದ್ರ ನರಹರಿ, ಡಿಎಫ್ಕೆಇಟಿಇ ತಂಡ ಅವರಿಂದಲೂ ಸಾಂಪ್ರದಾಯಿಕ ಕಥನ ಹಾಗೂ ಪ್ರದರ್ಶನ ಕಲೆಗಳ ಕಾರ್ಯಕ್ರಮ ನಡೆಯಲಿದೆ.
ಇದೇ ವೇಳೆ ವೀರ ನಾರಿ ಅಬ್ಬಕ್ಕ' ಎಂಬ ಡೋಡಾಟವನ್ನು ಮಹಿಳೆಯರನ್ನೊಳಗೊಂಡ ವಿಶೇಷ ತಂಡ ಪ್ರದರ್ಶಿಸಲಿದೆ. ಕರ್ನಾಟಕದ ಜಾನಪದ ಪ್ರದರ್ಶನ ಪರಂಪರೆಯಲ್ಲಿ ಮಹಿಳೆಯರ ಪಾತ್ರ ಮತ್ತು ಸಾಂಸ್ಕೃತಿಕ ಮಹತ್ವವನ್ನು ಈ ಪ್ರದರ್ಶನ ಬಿಂಬಿಸಲಿದೆ. ನಂತರ ಶ್ರೀ ಎಚ್.ಸಿ. ಶಿವಬುದ್ಧ, ಭಾಗವತರು ಹಾಗೂ ತಂಡದಿಂದ ಮೂಡಲಪಾಯ ಶೈಲಿಯ ಸಮುದಾಯ ಗೊಂಬೆಯಾಟಸತ್ಯ ಹರಿಶ್ಚಂದ್ರ’ ಪ್ರದರ್ಶನಗೊಳ್ಳಲಿದೆ.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಚಿತ್ತಾಮಣಿ ಅಂಜನಪ್ಪ ಅವರ ಮುಖವೀಣೆ ಪ್ರದರ್ಶನ ನಡೆಯಲಿದ್ದು, ನಂತರ ಶಾಲಾ ಮಕ್ಕಳಿಗಾಗಿ ಶ್ರೀ ರವೀಂದ್ರ ನರಹರಿ ಮತ್ತು ತಂಡದಿಂದ ತಂತಿ ಗೊಂಬೆಯಾಟದ ಮೂಲಕ ತೆನಾಲಿ ರಾಮಕೃಷ್ಣ ಹಾಗೂ ಪಂಚತಂತ್ರದ ಕಥೆಗಳು ಜೀವಂತಗೊಳ್ಳಲಿವೆ. ಸಂಜೆ ಶ್ರೀಮತಿ ಲಾವಣ್ಯ ಪ್ರಸಾದ್ ಅವರ ವಿಲ್ಲು ಪಾಟು ಹಾಗೂ ಡಾ. ಪ್ರಸನ್ನ ಮತ್ತು ಶ್ರೀಮತಿ ನಿರ್ಮಲಾ ಅವರಿಂದ `ಕುಮಾರವ್ಯಾಸ ಭಾರತ’ ಆಧಾರಿತ ಗಮಕ ಕಾರ್ಯಕ್ರಮ ನಡೆಯಲಿದೆ.
































