Home ಜಿಲ್ಲೆ ಮೈಸೂರು ಎಸ್.ಪಿ.ನಂದೀಶ್ ಗೆ ಪಿಎಚ್‍ಡಿ ಪದವಿ

ಎಸ್.ಪಿ.ನಂದೀಶ್ ಗೆ ಪಿಎಚ್‍ಡಿ ಪದವಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.10:
ತಾಲೂಕಿನ ಶೀಳನೆರೆ ಗ್ರಾಮದ ರೈತ ಕುಟುಂಬಕ್ಕೆ ಸೇರಿದ ಎಸ್.ಪಿ.ನಂದೀಶ್ ಅವರಿಗೆ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.


ಪಟ್ಟಣದ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಂದೀಶ್ ಅವರು ಪ್ರಸ್ತುತ ಹಾವೇರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಶೀಳನೆರೆ ಗ್ರಾಮದ ರೈತ ಎಸ್.ವಿ.ಪ್ರಭಾಕರ್ ಮತ್ತು ಕೆ.ಜಯರತ್ನ ದಂಪತಿಗಳ ಪುತ್ರರಾಗಿರುವ ನಂದೀಶ್ ಅವರು ಡಾ.ಎಲ್.ಯತೀಶ್ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿ ಗೌರವಕ್ಕೆ ಭಾಜನರಾಗಿದ್ದಾರೆ. ಡಾಕ್ಟರೇಟ್ ಪದವಿ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿರುವ ಎಸ್.ಎಲ್.ನಂದೀಶ್ ಅವರನ್ನು ಕೃಷ್ಣ ಇಂಜಿನಿಯರಿಂಗ್ ಕಾಲೇಜಿನ ಸಹದ್ಯೋಗಿ ಮಿತ್ರರು ಮತ್ತು ಶೀಳನೆರೆ ಗ್ರಾಮಸ್ಥರು ಅಭಿನಂಧಿಸಿದ್ದಾರೆ.