Home ಜಿಲ್ಲೆ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಗೆ ಪೊಲೀಸ್ ಬ್ರೇಕ್

ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಗೆ ಪೊಲೀಸ್ ಬ್ರೇಕ್

Oplus_19005440

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ. ಅ.10: ಕಳೆದ ಐದು ತಿಂಗಳಿಂದ ಉದ್ಯೋಗ ಮತ್ತು ಅದನ್ನು ಅನ್ ಲೈನ್ ನಲ್ಲಿಮಾಡಲು ಲ್ಯಾಪ್ ಟಾಪ್ ಕೊಡಿಸುವುದಾಗಿ ಟ್ರೇಡಿಂಗ್ ಹೆಸರಿನಲ್ಲಿ ಅನಂತಪುರಂ ಗ್ಯಾಂಗ್ ನಗರದ ಕಣೇಕಲ್ ಬಸ್ ನಿಲ್ದಾಣದ ಬಳಿ ಕಚೇರಿ ತೆರೆದು ಆಂದ್ರಪ್ರದೇಶದ ಜನರನ್ನು ವಂಚಿಸುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದ  ಸೈಬರ್ ಠಾಣೆ ಪೊಲೀಸರು. ಬೊಮ್ಮನಾಳ್ ರಸ್ತೆಯಲಿರುವ ಮನೆಯೊಂದನ್ನು ಆಯುರ್ವೇದ ಉತ್ಪನ್ನ ಮಾರಾಟ ಮಾಡುತ್ತೇವೆಂದು  ಬಾಡಿಗೆ ಪಡೆದು.  ಅಲ್ಲಿ

ಟ್ರಾನ್ಸ್ ಇಂಡಿಯಾ ಕೋ.ಪ್ರೈ.ಲಿಮಿಟೆಡ್ ಎಂಬ ಹೆಸರಿನ ಕಛೇರಿಯ ಮೇಲೆ ದಾಳಿಮಾಡಿ.  ಅನಂತಪುರಂನ  ಸತೀಶ ನಾಯ್ಕ ಎಂಬಾತ 8 ಜನ ಮಹಿಳೆಯರು, 7 ಜನ ಹುಡುಗರನ್ನು ಟೆಲಿಕಾಲರ್ಸ್ ಗಳಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಉದ್ಯೋಗ, ಲ್ಯಾಪ್ಟಾಪ್, ಹಾಗು ಟ್ರೇಡಿಂಗ್ ಮೆಟೇರಿಯಲ್ಗಳನ್ನು ಕೊಡುವುದು ನಂಬಿಸಿ. ಅವರಿಂದ ಹಣವನ್ನು ಆನ್ಲೈನ್ ಮೂಲಕ ಕೆಲಸ ಮಾಡುತ್ತಿರುವ ಸಿಬ್ಬಂದಿಯವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿ. ಈ ಹಣವನ್ನು ಕೆಲಸಗಾರರ ಬ್ಯಾಂಕ್ ಖಾತೆ ಗಳಿಂದ ವಿತ್ ಡ್ರಾ ಮಾಡಿಸಿ ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ಆನ್ಲೈನ್ ವಂಚನೆ ಮಾಡುತ್ತಿದ್ದ.

ಆರೋಪಿಯು ಟೆಲಿಕಾಲರ್ಸ್ ಗಳಿಗೆ ಯಾವುದೇ ಸಂಬಳವನ್ನು ನೀಡದೇ, ಕಮೀಷನ್ ನೀಡುತ್ತಿದ್ದನು. ವಂಚನೆಗೊಳಗಾದವರು ಬಹುತೇಕರು ಆಂದ್ರಪ್ರದೇಶದ ವರೇ ಆಗಿದ್ದಾರೆ.  ಒಬ್ಬರಿಂದ 10 ರಿಂದ 15 ಸಾವಿರ  ರೂ ಪಡೆಯುವ ಸಿಬ್ಬಂದಿಗೆ 900 ಕಮೀಷನ್ ನೀಡುತ್ತಿದ್ದನಂತೆ.

ಮುಖ್ಯ ಆರೋಪಿ ನಾಪತ್ತೆಯಾಗಿದ್ದಾನೆ. ಕಾಲ್ ಸೆಂಟರ್ ನಲ್ಲಿ 15 ಜನರಿಂದ ಮಾಹಿತಿ ಪಡೆದು ಕಳಿಸಲಾಗಿದೆ.

ಕಾಲ್ ಸೆಂಟರ್ ನಿಂದ 21 ಮೊಬೈಲ್, 1 ಲ್ಯಾಪ್ ಟಾಪ್ 13.670 ರೂ ನಗದು ಹಾಗು 5 ಬ್ಯಾಂಕ್ ಪಾಸ್ಬುಕ್ಗಳನ್ನು ಜಪ್ಪು ಮಾಡಿಕೊಂಡಿದೆ. 13 ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಲಾದೆ. ಪ್ರಿಜ್ ಮಾಡಿದ ಖಾತೆಗಳಲ್ಲಿರುವ ಹಣದ ಮೊತ್ತವನ್ನು ತನಿಖೆಯಲ್ಲಿ ಪತ್ತೆ ಮಾಡಲಾಗುವುದು ಎಸ್ಪಿ ಯವರು ತಿಳಿಸಿದ್ದಾರೆ.