
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಅ.01 ಪಟ್ಟಣದ ರಾಮನಗರ ಕೂಡ್ಲಿಗಿ ವೃತ್ತವನ್ನು ಗಂಗಾವತಿ ವೆಂಕಟರಮಣ ಶ್ರೇಷ್ಠಿ ವೃತ್ತವನ್ನಾಗಿ ನಾಮ ಪಲಕ ಉದ್ಘಾಟನೆ ಶಾಸಕ ಕೆ. ನೇಮಿರಾಜ್ ನಾಯ್ಕ ನೆರವೇರಿಸಿದರು. ನಂತರ ಮಾತನಾಡಿ ಅಂದಿನ ಕಾಲದಲ್ಲಿ ಆಸ್ಪತ್ರೆ, ಕಾಲೇಜ್, ಛತ್ರ,ದೇವಸ್ಥಾನ ನಿರ್ಮಾಣಕ್ಕೆ ಕೋಟಿಗಟ್ಟಲೆ ಬೆಲೆ ಬಾಳುವಂತ ಭೂಮಿ ದಾನ ಮಾಡಿರುವ ಈ ಭಾಗದ ಮಹಾನ್ ವ್ಯಕ್ತಿ ಗಂಗಾವತಿ ವೆಂಕಟರಮಣ ಶ್ರೇಷ್ಠಿ ಎಂದರೆ ತಪ್ಪಲ್ಲ, ಮುಂದಿನ ಪೀಳಿಗೆಗೆ ಬಡವರ ಮಕ್ಕಳು ಸೇರಿದಂತೆ ಎಲ್ಲರೂ ಶಿಕ್ಷಣ ದೊರೆಯುವಂತೆ ಅವತ್ತೇ ಯೋಚಿಸಿ ಅರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಯಾರು ಪುಕ್ಕಟೆ ಯಾಗಿ ಒಂದು ಸೆಂಟ್ಸ್ ಜಾಗ ನೀಡಲು ಹಿಂದು ಮುಂದು ನೋಡುತ್ತಾರೆ. ಆದರೆ ವೆಂಕಟರಮಣ ಶೆಟ್ರು ಧಾನ ಕೊಡುವ ಮೂಲಕ ಈ ತಾಲೂಕಿನ ಒಂದು ಶಾಶ್ವತ ಹೆಸರು ಉಳಿದಿದೆ. ಅಂತಹ ವ್ಯಕ್ತಿ ಹೆಸರು ಈ ವೃತ್ತಕ್ಕೆ ನಾಮಕರಣ ಮಾಡಿರುವುದು ಒಳ್ಳೆಯ ಕೆಲಸ ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಜಿ. ವಿಜೇತ ಇಂಜಿನಿಯರ್, ಜಿ. ವಿನಾಯಕ,ಗಂಗಾವತಿ ಮಂಜುನಾಥ ಶ್ರೇಷ್ಠಿ, ಗಂಗಾವತಿ ಸುದರ್ಶನ ಶ್ರೇಷ್ಠಿ, ಗಂಗಾವತಿ ಲಕ್ಷ್ಮೀಪತಿ (ನಿಕಟಪೂರ್ವ ಅಧ್ಯಕ್ಷರು), ಬೆಲ್ಲಂಕೊಂಡಿ ರಮೇಶ್,ಗೋಪಾಲ, ವೆಂಕಟಾಚಲಪತಿ ವೇಣುಗೋಪಾಲ, ಕುಮಾರ್ ಇಂಜಿನಿಯರ್, ಕೆ. ಪ್ರಭಾಕರ್ ಶ್ರೇಷ್ಠಿ, ಬೇಳೂರು ಮಾರುತಿ ಶ್ರೇಷ್ಠಿ, ಕುಪ್ಪಾ ಶಿವಕುಮಾರ್, ಬಾಲಾಜಿ, ಪ್ರವೀಣ್, ಪ್ರಕಾಶ್, ಬಸಾಪುರ ರಾಘವೇಂದ್ರ, ಚಿದ್ರಿ ಅನಿಲ್ ಹನುಮಂತ ಶ್ರೇಷ್ಠಿ, ನಾಣ್ಯಪರ ಕೃಷ್ಣಮೂರ್ತಿ, ರಾಜೇಂದ್ರ ಗೋಪಾಲ,
ಲಕ್ಷ್ಮೀ ಹೆಚ್, ಸವಿತಾ ರಮೇಶ್, ರೋಜಾ ಗಂಗಾವತಿ, ವಿನುತ, ರಮ್ಯಾ, ಪಾರ್ವತಕ್ಕ, ಭಾರತಿ, ಜಯಶ್ರೀ, ಶಿಲ್ಪಾ ನಂದಿಬಂಡಿ, ಮಾಧವಿ ಚಿದ್ರಿ, ಇತರರಿದ್ದರು.























