Home ಜಿಲ್ಲೆ ಹಂಪಿ ಪರ್ಲ್ಸ್ ಮತ್ತು ಹೆರಿಟೇಜ್ ಕ್ಲಬ್ ನಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಹಂಪಿ ಪರ್ಲ್ಸ್ ಮತ್ತು ಹೆರಿಟೇಜ್ ಕ್ಲಬ್ ನಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.5 ರೋಟರಿ ಹಂಪಿ ಪರ್ಲ್ಸ್ ಮತ್ತು ಹೆರಿಟೇಜ್ ಕ್ಲಬ್ ವತಿಯಿಂದ ಸಾಧಕರ ಸನ್ಮಾನ ಸಮಾರಂಭ ನಗರದಲ್ಲಿ ಶನಿವಾರ ಜರುಗಿತು.

ನಗರದ ರೋಟರಿ ಆವರಣದ ಟಾಟಾ ಮೆಮೋರಿಯಲ್ ಸಭಾಂಗಣದಲ್ಲಿ ರೋಟರಿ ಹಂಪಿ ಪರ್ಲ್ಸ್ ಮತ್ತು ರೋಟರಿ ಹೆರಿಟೇಜ್ ಕ್ಲಬ್ನ ಸಹಯೋಗದಲ್ಲಿ ಜರುಗಿದ ವೈದ್ಯರ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ, ಅಂಚೆ ಮತ್ತು ಪತ್ರಿಕಾ ದಿನಾಚರಣೆಯನ್ನು  ಅರ್ಥಪೂರ್ಣವಾಗಿ ಆಚರಿಸುವ ಮೂಲಕ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆರಿಟೇಜ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ, ಪರ್ಲ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಸಿಂಧಗಿ ಅವರು, ವೈದ್ಯರು, ಪತ್ರಕರ್ತರು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳು ಸಮಾಜದ ಮೂರು ಪ್ರಮುಖ ಆಧಾರಸ್ತಂಭಗಳಿದ್ದಂತೆ. ವೈದ್ಯರು ಪ್ರಾಣವನ್ನು ಉಳಿಸಿದರೆ, ಪತ್ರಕರ್ತರು ಸತ್ಯವನ್ನು ಜಗತ್ತಿಗೆ ತಿಳಿಸಿ ಜಾಗೃತಿ ಮೂಡಿಸುತ್ತಾರೆ. ಇನ್ನು ಚಾರ್ಟರ್ಡ್ ಅಕೌಂಟೆಂಟ್ಗಳು ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ದೇಶದ ಅಭಿವೃದ್ಧಿಗೆ ಬುನಾದಿ ಹಾಕುತ್ತಾರೆ. ಇಂತಹ ವೃತ್ತಿಪರರ ನಿಸ್ವಾರ್ಥ ಸೇವೆ ಮತ್ತು ಬದ್ಧತೆಯೇ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಬೆನ್ನೆಲುಬಾಗಿದೆ ಎಂದು ಸ್ಮರಿಸಿದರು. 

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಪೂರ್ಣಚಂದ್ರ, ಡಾ.ಹಾಲಮ್ಮ, ಡಾ.ಚೈತ್ರಾ, ಡಾ. ನಿರಂಜನ ವಸ್ತ್ರದ್, ಡಾ.ರಾಘವೇಂದ್ರ ಹಾಗೂ ಚಾರ್ಟಡ್ ಅಕೌಂಟೆಂಟ್ಗಳಾದ ವೀಣಾ ಎಲ್. ಕುಂಟೆ, ನಾಗರಾಜ್ ಮತ್ತು ಪತ್ರಕರ್ತರಾದ ಕೆ.ಎಂ.ರೇಖಾ ಪ್ರಕಾಶ್, ಪೂರ್ಣಿಮಾ ದಫೇದಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆರಿಟೇಜ್ ಕ್ಲಬ್ ನ ಕಾರ್ಯದರ್ಶಿ ಶಾರದಾ ಪ್ರಸಾದ್, ರೋಟರಿ ಹಂಪಿ ಪರ್ಲ್ಸ್ನ ಕಾರ್ಯದರ್ಶಿ ಡಾ. ಮಾಧವ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸಂಜನಾ ಪಾಠಕ್ ಮತ್ತು ಡಾ. ಶ್ವೇತಾ ವಸ್ತ್ರದ್ ನಿರ್ವಹಿಸಿದರು.