Home ಸಿನೆಮಾ ‘ಸ್ಪಾರ್ಕ್’ನಲ್ಲಿ ಜಾಕಿ ಭಾವನಾ ಲಾಯರ್ ವೈದೇಹಿ

‘ಸ್ಪಾರ್ಕ್’ನಲ್ಲಿ ಜಾಕಿ ಭಾವನಾ ಲಾಯರ್ ವೈದೇಹಿ

ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿರುವ ನಟಿ

ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ‘ಸ್ಪಾರ್ಕ್’ ಚಿತ್ರತಂಡ ಒಂದೊಂದೇ ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ನಟಿ ಭಾವನಾ ನಿರ್ವಹಿಸಿರುವ ವಿಶೇಷ ಪಾತ್ರದ ಪರಿಚಯ ಮಾಡಿಕೊಟ್ಟಿದೆ. ಚಿತ್ರದಲ್ಲಿ ಅವರು ವೈದೇಹಿ ಎಂಬ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಸ್ಪಾರ್ಕ್’ ಕಥೆಯಲ್ಲಿರುವ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಸ್ಪಾರ್ಕ್ ಇದೆ. ವಿಭಿನ್ನ ಹಾಗೂ ಸವಾಲಿನ ಪಾತ್ರಗಳ ಆಯ್ಕೆಗೆ ಆದ್ಯತೆ ನೀಡುವ ಭಾವನಾ, ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಅವರು ಪಾತ್ರದ ಕುರಿತು ವಿವರಿಸಿದಾಗ ಇದೊಂದು ತಾನು ಈ ಹಿಂದೆ ಮಾಡಿರದ ಪಾತ್ರ ಎಂಬ ಕಾರಣಕ್ಕೆ ಚಿತ್ರ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ಬಹಳ ಸಮಯದ ಬಳಿಕ ತಮ್ಮ ನಟನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ನಾಯಕ ನಿರಂಜನ್ ಸುಧೀಂದ್ರ ಅವರ ಬಹುಮುಖ ಪ್ರತಿಭೆಯನ್ನು ಭಾವನಾ ಮೆಚ್ಚಿಕೊಂಡಿದ್ದಾರೆ. ನಟನೆ, ನೃತ್ಯ ಹಾಗೂ ಸಾಹಸದಲ್ಲೂ ಅವರು ಗಮನ ಸೆಳೆಯುತ್ತಾರೆ ಎಂದು ಪ್ರಶಂಸಿಸಿರುವ ಅವರು, ಚಿತ್ರ ಕೌಟುಂಬಿಕ ಅಂಶ, ಉತ್ತಮ ಸಂದೇಶ ಹಾಗೂ ಮನರಂಜನೆಯನ್ನು ಒಳಗೊಂಡ ಸಂಪೂರ್ಣ ಪ್ಯಾಕೇಜ್ ಆಗಿದೆ ಎಂದಿದ್ದಾರೆ.

ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ಕಥೆಯ ಪ್ರತಿಯೊಂದು ಪಾತ್ರಕ್ಕೂ ಸೂಕ್ತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಪತ್ರಕರ್ತನಾಗಿರುವ ನಾಯಕನಿಗೆ ಸಹಕಾರಿಯಾಗಿ ಬರುವ ವೈದೇಹಿ ಎಂಬ ಲಾಯರ್ ಪಾತ್ರದಲ್ಲಿ ಭಾವನಾ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಭಾವನಾ ಅವರೊಂದಿಗೆ ನಟಿಸಿರುವ ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ ತಮ್ಮ ಅನುಭವ ಹಂಚಿಕೊಂಡರು. ವಿಜಯ್ ಚೆಂಡೂರ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಅಶ್ವಥ್ ನೀನಾಸಂ ಜೋಡಿಯಾಗಿ ನಟಿಸಿದ್ದಾರೆ. ಮಹಾಂತೇಶ್ ಹಿರೇಮಠ್ ಆ್ಯಂಬುಲೆನ್ಸ್ ಚಾಲಕನ ಪಾತ್ರದಲ್ಲಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್, ಭಾವನಾ ಅವರ ಕಸಿನ್ ಬ್ರದರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಚನಾ ಇಂದರ್ ವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.