Home ಸುದ್ದಿ ರಾಷ್ಟ್ರೀಯ ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು: 1 ಕೋಟಿ ಮೌಲ್ಯದ ಚಿನ್ನ ದರೋಡೆ

ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು: 1 ಕೋಟಿ ಮೌಲ್ಯದ ಚಿನ್ನ ದರೋಡೆ

ನಾಗರ್‍ಕೋಯಿಲ್,ಸೆ.27-ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾದ ವೈಯಕ್ತಿಕ ವಿಚಾರಗಳ ಪ್ರದರ್ಶನ ಅಪಾಯಕ್ಕೆ ಆಹ್ವಾನ ಎಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿರಂತರವಾಗಿ ಇನ್‍ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‍ನಲ್ಲಿ ಅಪಾರ ಪ್ರಮಾಣದ ಬಂಗಾರ ಹಾಗೂ ನಗದು ಪ್ರದರ್ಶಿಸುತ್ತಿದ್ದ ಇನ್ಫ್ಲುಯೆನ್ಸರ್ ಮಹಿಳೆಯೊಬ್ಬರ ಮನೆಯಿಂದ ಸುಮಾರು ?1 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವಾಗಿದೆ.
ತಮಿಳುನಾಡಿನ ನಾಗರ್‍ಕೋಯಿಲ್ ಸಮೀಪದ ಥಾಮತ್ತುಕೋಣಮ್ ವಿಐಪಿ ಗಾರ್ಡನ್‍ನಲ್ಲಿ ನೆಲೆಸಿರುವ ಡ್ರೈ ಫ್ರೂಟ್ಸ್ ರಫ್ತು ಉದ್ಯಮಿ ವಿನೋದ್ ಕುಮಾರ್ ಮತ್ತು ಅವರ ಪತ್ನಿ ಮಧುಮಿತಾ (29) ದಂಪತಿಗಳ ಮನೆಯಲ್ಲಿ ಈ ಕಳ್ಳತನ ನಡೆದಿದೆ.


ಇತ್ತೀಚೆಗೆ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬಟ್ಟೆ ಖರೀದಿಗಾಗಿ ತಿರುನೆಲ್ವೇಲಿಗೆ ತೆರಳಿದ್ದರು. ಈ ಸಮಯವನ್ನು ಕಾಯುತ್ತಿದ್ದ ದುಷ್ಕರ್ಮಿಗಳು, ಮನೆಯ ಹಿಂಬಾಗಿಲನ್ನು ಕಟರ್ ಬಳಸಿ ಮುರಿದು ಒಳನುಗ್ಗಿದ್ದಾರೆ. ಮಲಗುವ ಕೋಣೆಯಲ್ಲಿದ್ದ ಕಬೋರ್ಡ್ ಮತ್ತು ಸೂಟ್‍ಕೇಸ್‍ಗಳಲ್ಲಿದ್ದ ಸುಮಾರು 118 ರಿಂದ 120 ಪವನ್ ಚಿನ್ನಾಭರಣ, ಬೆಲೆಬಾಳುವ ವಜ್ರದ ಒಡವೆಗಳು ಮತ್ತು 50,000 ನಗದನ್ನು ದೋಚಿ ಪರಾರಿಯಾಗಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಮಧುಮಿತಾ, ತಾವು ಪ್ರತಿ ತಿಂಗಳು ಖರೀದಿಸುವ ಚಿನ್ನದ ಆಭರಣಗಳನ್ನು ಪ್ರದರ್ಶಿಸುವ ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಹಣದ ಕಟ್ಟುಗಳ ಮೇಲೆ ಮಗುವನ್ನು ಮಲಗಿಸುವ, ಪ್ರವಾಸ ಹಾಗೂ ಶಾಪಿಂಗ್ ಹೋಗುವ ಮಾಹಿತಿಯನ್ನು ರೀಲ್ಸ್ ಮೂಲಕ ಹಂಚಿಕೊಳ್ಳುತ್ತಿದ್ದರು.


ಕುಟುಂಬವು ಮನೆಯಲ್ಲಿ ಇಲ್ಲದಿರುವ ಸಮಯವನ್ನು ಇನ್ಸ್ಟಾಗ್ರಾಮ್ ಪೆÇೀಸ್ಟ್‍ಗಳ ಮೂಲಕವೇ ತಿಳಿದುಕೊಂಡ ಕಳ್ಳರು, ಅತ್ಯಂತ ಯೋಜಿತವಾಗಿ ಈ ಕಳವು ನಡೆಸಿದ್ದಾರೆ ಎಂದು ಪೆÇಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ಕನ್ಯಾಕುಮಾರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅನ್ಷುಲ್ ನಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು 5 ವಿಶೇಷ ಪಡೆಗಳನ್ನು ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಇನ್ಫ್ಲುಯೆನ್ಸರ್‍ನ ಸೋಶಿಯಲ್ ಮೀಡಿಯಾ ಖಾತೆಯ ಫಾಲೋವರ್ಸ್‍ಗಳ ಚಟುವಟಿಕೆಗಳನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ.