
ಸುಳ್ಯ:ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಡವರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಸುಳ್ಯ ಮತ್ತು ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಡೆಯಿತು.
ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಇದರ ಸಹಕಾರದೊಂದಿಗೆ ಸುಳ್ಯ ಅಂಬ್ಯುಲೆನ್ಸ್ ಚಾಲಕ ಮಾಲಕ ಸಂಘಕ್ಕೆ ಹಾಗೂ ಸುನ್ನಿ ಯುವಜನ ಸಂಘ ಸುಳ್ಯ ಸೇರಿದಂತೆ ಎರಡು ಆಕ್ಸಿಜನ್ ಸಿಲಿಂಡರ್ ಕಿಟ್ಟನ್ನು ಸಂಘದ ಪಧಾದಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು. ಅಲ್ಲದೇ ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಪೆನ್, ಪೆನ್ಸಿಲ್, ಎರೇಸರ್, ಶಾರ್ಪನರ್ ಹಾಗೂ ಟೀಶರ್ಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಹಸ್ತಾಂತರ ಕಾರ್ಯಕ್ರಮದಲ್ಲಿ ಸಜ್ಜನ ಪ್ರತಿಷ್ಠಾನ ಯುನೈಟೆಡ್ ಅರಬ್ ಎಮಿರೇಟ್ಸ್ ಘಟಕ ಅಧ್ಯಕ್ಷ ಅನ್ವರ್ ಶಿರೂರ್ ಶುಭ ಹಾರೈಸಿ ಸಜ್ಜನ ಪ್ರತಿಷ್ಠಾನ ಕಾರುಣ್ಯ ಸೇವೆಯಲ್ಲಿ ಮಾದರಿ ಕೆಲಸವನ್ನು ಮಾಡುತ್ತಿದೆ ಇದು ನಿಜಕ್ಕೂ ಅಭಿನಂದನಾರ್ಹ ಸೇವೆ. ಮುಂದೆಯೂ ಪ್ರತಿಷ್ಠಾನ ಸಜ್ಜನ ಪ್ರತಿಷ್ಠಾನದ ಸಮಾಜ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಸುಳ್ಯ ರೆಡ್ ಕ್ರಾಸ್ ಸಭಾಪತಿ ಪಿ.ಬಿ. ಸುಧಾಕರ ರೈ ಆಕ್ಸಿಜನ್ ಸಿಲಿಂಡರ್ ಹಸ್ತಾಂತರ ಮಾಡಿದರು. ಆಕ್ಸಿಜನ್ ಸಿಲಿಂಡರ್ ಕೊಡುಗೆಯಲ್ಲಿ ಬೆಂಗಳೂರು ಪಾರ್ಮೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಆರಿಸ್ ಪೇರಡ್ಕ ಸಹಕರಿಸಿದರು.
ಟೀಶರ್ಟ್ ವಿತರಣೆ
ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಪೆನ್, ಪೆನ್ಸಿಲ್, ಎರೇಸರ್, ಶಾರ್ಪನರ್ ಹಾಗೂ ಟೀಶರ್ಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಇಬ್ರಾಹಿಂ, ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ರಾಮಚಂದ್ರ ಕಲ್ಲುಗದ್ದೆ, ಎಸ್.ಪಿ. ಲೋಕನಾಥ್, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಎಸ್‌ಡಿಎಂಸಿ ಅಧ್ಯಕ್ಷೆ ಸೌಮ್ಯ ಸತ್ಯಜಿತ್ ಮುಖ್ಯ ಶಿಕ್ಷಕ ಹನುಮಂತಪ್ಪ ಜಿ, ನಿವೃತ್ತ ಮುಖ್ಯ ಶಿಕ್ಷಕ ಯು.ಎಸ್. ಚಿದಾನಂದ ಮಾಸ್ಟರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶೀಫ್ ಶಿರೂರು, ಸಜ್ಜನ ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಹಾಗೂ ಅಯ್ಯೂಬ್ ಗೂನಡ್ಕ, ಮರ್ಜೂಕ್ ಕಡೆಪಾಲ ಇದ್ದರು.


































