
ಸಂಜೆವಾಣಿ ವಾರ್ತೆ
ನಂಜನಗೂಡು.ಸೆ.23:- ಶಾರ್ಟ್ ಸಕ್ರ್ಯೂಟ್ ನಿಂದ ಅಂಗಡಿ ಸೇರಿದಂತೆ ಪಾತ್ರೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಗರದ ಪುರಿ ಬಟ್ಟಿಯ ರಸ್ತೆಯಲ್ಲಿ ಜರುಗಿದೆ.
ಘಟನೆ ವಿವರ: ಮಂಗಳವಾರ ಮದ್ಯನ 12 ಗಂಟೆ ಸಮಯದಲ್ಲಿ ಮನೆಯ ಮಾಲೀಕರಾದ ಚಂದ್ರಕಲಾ ರವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಾರ್ಟ್ ಸಕ್ರ್ಯೂಟ್ ನಿಂದ ಮನೆಯಲ್ಲಿದ್ದ ಕಾಗದ ಹಾಗೂ ಕಾರ್ಡ್ ಬೋರ್ಡ್ ಶೀಟುಗಳಿಗೆ ಬೆಂಕಿ ತಗಲಿದೆ. ಬೆಂಕಿ ನಂದಿಸಲು ಯತ್ನಿಸಿದ ಚಂದ್ರಕಲಾ ರವರು ಬೆಂಕಿ ಅರದ ಹಿನ್ನೆಲೆಯಲ್ಲಿ ಗಾಬರಿಗೊಂಡು ಮನೆಯಿಂದ ಹೊರಬಂದು ನಿಯಂತ್ರಣ ಕಳೆದುಕೊಂಡು ಕುಸಿದಿದ್ದಾರೆ. ನೆರೆಹೊರೆಯವರು ಅವರನ್ನು ಆಸ್ಪತ್ರೆಗೆ ಸಾಗಿಸಿ ವಿಚಾರಿಸಿದಾಗ ಮನೆಯೊಳಗೆ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬರುವಷ್ಟರಾಗಲೇ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಮನೆಯನ್ನು ಆವರಿಸಿದೆ ಪಕ್ಕದಲ್ಲಿ ಇದ್ದ ಪಾತ್ರೆ ಅಂಗಡಿ ಹಾಗೂ ಹಿಂಬದಿಯಲ್ಲಿದ್ದ ಮರದ ದಿಮ್ನಿ ಹಾಗೂ ಕಾರ್ಡ್ ಬೋರ್ಡ್ ಶೀಟ್ಗಳಿಗೆ ವ್ಯಾಪಿಸಿ ಬೃಹದಾಕಾರದಲ್ಲಿ ಬೆಳದು. ಸಂಪೂರ್ಣವಾಗಿ ಕಟ್ಟಡವನ್ನು ಅವರಿಸಿದೆ.
ಬೆಂಕಿ ಪಸರಿಸುತ್ತಿದ್ದ ರಭಸಕ್ಕೆ ಅಂಗಡಿಯಲ್ಲಿದ್ದ ಪಾತ್ರೆ, ತಟ್ಟೆ, ಲೋಟ, ಎಲ್ಲವನ್ನು ಆಹುತಿ ಪಡೆದಿದೆ. ಅದೃಷ್ಟವಶಾತ್ ಮನೆಯಲಿದ್ದ 2 ಸಿಲಿಂಡರ್ ಗಳಿಗೆ ಹಾನಿಯಾದರು ಸ್ಪೋಟವಲ್ಲದೇ ಇರುವುದು ಚಮತ್ಕಾರ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದ ಮೊದಲ ಮಹಡಿಯಲ್ಲಿರುವ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿನಿಯರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿ ಆಗಬಹುದಾದ ಬಹುದೊಡ್ಡ ಅನಾಹುತ ತಪ್ಪಿಸಲಾಗಿದೆ.
ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ ಸಿಬಂದಿಗಳು ಜರಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಈ ವೇಳೆ ಮಾಧ್ಯಮದರ ಜೊತೆ ಮಾತನಾಡಿದ ಅಂಗಡಿ ಮಾಲೀಕರಾದ ಅಶೋಕ್ ಬಿಷ್ಣೋಯ್ ರವರು ಘಟನೆ ಬಗ್ಗೆ ವಿವರಿಸುತ್ತಾ ಸುಮಾರು 12:30 ಸಮಯದಲ್ಲಿ ಅಂಗಡಿಯ ಹಿಂಬದಿಯಿಂದ ಬೆಂಕಿಯ ಕಿಟ್ಟಿ ಪಾತ್ರೆ ಅಂಗಡಿಯೊಳಗೆ ಬಿದಿತ್ತು. ತಕ್ಷಣ ಮುಂಭಾಗದಲ್ಲಿ ಇದ್ದ ಕೆಲವು ವಸ್ತುಗಳನ್ನು ಹೊರ ತರಲಾಯಿತು. ಬೆಂಕಿ ಹರಡಿದ ರಭಸಕ್ಕೆ ಸುಮಾರು 25 ರಿಂದ 30 ಲಕ್ಷ ರೂಗಳ ಪಾತ್ರೆ, ತಟ್ಟೆ, ಲೋಟ, ಮುಂತಾದವುಗಳು ಸಂಪೂರ್ಣವಾಗಿ ನಾಶವಾಗಿದೆ. ಅಂಗಡಿಯಲ್ಲಿದ್ದ ಒಂದೆ ಒಂದು ವಸ್ತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಬೆಂಕಿಯ ಜೊತೆ ಸೆಣೆಸಾಡಿ ಆಗಬಹುದಿತ್ತ ಅನಾಹುತ ತಪ್ಪಿಸಲು ಶ್ರಮಿಸಿದ ಯುವಕರ ತಂಡಕ್ಕೆ ನಂಜನಗೂಡಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದರು.
























