
ನವದೆಹಲಿ, ನ. 28: ಮದುವೆ ಸೀಸನ್ನಲ್ಲಿ ಆಭರಣ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಚಿನ್ನ ಮತ್ತು ಬೆಳ್ಳಿ ದರಗಳು ತೀವ್ರ ಆಘಾತ ನೀಡಿವೆ.
ಕಳೆದ ಮೂರು ದಿನಗಳಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 5,130 ರಷ್ಟು, 22 ಕ್ಯಾರೆಟ್ ಚಿನ್ನದ ಬೆಲೆ 4,710 ರಷ್ಟು ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 3,850 ರಷ್ಟು ಹೆಚ್ಚಳವಾಗಿದೆ. ಇಂದು ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1.28 ಲಕ್ಷದ ಗಡಿ ದಾಟಿದ್ದು, 22 ಕ್ಯಾರೆಟ್ ಚಿನ್ನ 1.17 ಲಕ್ಷ ಹಾಗೂ 18 ಕ್ಯಾರೆಟ್ ಚಿನ್ನ 96,000 ದಾಟಿದೆ.
ಗುಡ್ರಿಟನ್ರ್ಸ್ ವರದಿಯ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರದಲ್ಲಿ ಅಲ್ಪ ವ್ಯತ್ಯಾಸ ಕಂಡುಬಂದಿದೆ. ದೆಹಲಿ ಮತ್ತು ಚಂಡೀಗಢದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1,28,560 ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 1,17,860 ದರವಿದೆ.
ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ರಾಯ್ಪುರದಲ್ಲಿ 24 ಕ್ಯಾರೆಟ್ ಚಿನ್ನ 1,28,410 ಕ್ಕೆ ಹಾಗೂ ಮುಂಬೈ, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನ 1,17,710 ಕ್ಕೆ ಮಾರಾಟವಾಗುತ್ತಿದೆ.
ಅಹಮದಾಬಾದ್, ಭೋಪಾಲ್ ಮತ್ತು ಪಾಟ್ನಾದಲ್ಲಿ 24 ಕ್ಯಾರೆಟ್ ಚಿನ್ನದ ದರ 1,28,460 ಆಗಿದ್ದು, ವಿವಿಧ ನಗರಗಳಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ 96,310 ರಿಂದ 96,460 ರ ವ್ಯಾಪ್ತಿಯಲ್ಲಿದೆ.
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯೂ ಸತತ ಎರಡು ದಿನಗಳಲ್ಲಿ ಪ್ರತಿ ಕಿಲೋಗ್ರಾಂಗೆ 5,100 ರಷ್ಟು ಏರಿಕೆ ಕಂಡು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ನವೆಂಬರ್ 28 ರ ಬೆಳಿಗ್ಗೆ ಪ್ರತಿ ಕೆ.ಜಿ. ಬೆಳ್ಳಿ ದರದಲ್ಲಿ 100 ಹೆಚ್ಚಳವಾಗಿದ್ದು, ದೇಶದ ಬಹುತೇಕ ನಗರಗಳಲ್ಲಿ ಬೆಳ್ಳಿ ಬೆಲೆ 1,70,100 ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್ಗೆ $43.44 ಕ್ಕೆ ದಾಖಲಾಗಿದ್ದು, ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಏರುಮುಖವಾಗಿ ಸಾಗುತ್ತಿವೆ.




















