Home ಜಿಲ್ಲೆ ಮಂಗಳೂರು ರಸ್ತೆ ಬದಿಯಲ್ಲಿ ಕಸ ಎಸೆದ ಮೈಸೂರಿನ ವ್ಯಕ್ತಿಗೆ ದಂಡ ವಿಧಿಸಿದ ಸಂಪಾಜೆ ಗ್ರಾಮ ಪಂಚಾಯಿತಿ

ರಸ್ತೆ ಬದಿಯಲ್ಲಿ ಕಸ ಎಸೆದ ಮೈಸೂರಿನ ವ್ಯಕ್ತಿಗೆ ದಂಡ ವಿಧಿಸಿದ ಸಂಪಾಜೆ ಗ್ರಾಮ ಪಂಚಾಯಿತಿ

ಸುಳ್ಯ:ದ.ಕ ಸಂಪಾಜೆ ಗ್ರಾ.ಪಂ.ರಾಷ್ಟ್ರೀಯ ಹೆದ್ದಾರಿ ೨೭೫ ಕಡೆಪಾಲ ಎಂಬಲ್ಲಿ ಮೈಸೂರು ಬನ್ನಿಮಂಟಪ ಅಂಗಡಿಯೊಂದರ ಕಸವನ್ನು ರಾತ್ರಿ ವೇಳೆ ಸುರಿದು ಹೋಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಸಂಪಾಜೆ ಗ್ರಾ.ಪಂ ಕಸವಿಲೇರಿ ಸಿಬ್ಬಂದಿಗಳು ಸ್ವಚ್ಛತೆ ಮಾಡುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಏಳು ಕಸದ ಗೋಣಿಚೀಲಗಳು ಕಂಡು ಬಂದಿದೆ. ಕೂಡಲೇ ಸಿಬ್ಬಂದಿಯು ಮಾಜಿ . ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್‌ರವರಿಗೆ ಮಾಹಿತಿ ತಿಳಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಲಾ ಡಿಸೋಜಾ, ಪ್ರಮೋದ್ ಗಮನಕ್ಕೆ ತಂದು ಸ್ಥಳಕ್ಕೆ ಪಂಚಾಯಿತಿ ಕಾರ್ಯದರ್ಶಿ ತಿರುಮಲೇಶ್ವರ ಹಾಗೂ ಮಾಜಿ ಉಪಾಧ್ಯಕ್ಷ ಎಸ್ ಕೆ ಹನೀಫ್ ತೆರಳಿ ಕಸದ ವಾಹನದ ಮೂಲಕ ಕಸವನ್ನು ಕಲ್ಲುಗುಂಡಿ ಕಚೇರಿಗೆ ತಂದು ಪರಿಶೀಲನೆ ನಡೆಸಿದರು. ಕಸದ ರಾಶಿಯನ್ನು ಪರಿಶೀಲನೆ ನಡೆಸಿದಾಗ ಜಿ ಎಸ್.ಟಿ ನಂಬರ್ ಇರುವ ರಶೀದಿ ಪತ್ತೆಯಾಗಿದ್ದು, ಜಾಲಾಡಿದಾಗ ಮಂಡ್ಯ ಮೂಲದ ವ್ಯಕ್ತಿಯೊಬ್ಬರ ದೂರವಾಣಿ ಸಂಖ್ಯೆ ದೊರೆತಿದೆ. ಕೂಡಲೇ ಗ್ರಾ.ಪಂ ದೊರಕಿದ ನಂಬರ್‌ಗೆ ಕರೆ ಮಾಡಿದ್ದು, ವ್ಯಕ್ತಿಯು ತಪ್ಪನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಬಳಿಕ ಅವರಿಗೆ ರೂ.೫೦೦೦ ದಂಡ ಹಾಕಿ ಕಸ ಎಸೆಯದಂತೆ ಎಚ್ಚರಿಕೆ ನೀಡಲಾಯಿತು.