ಸುಳ್ಯ:ಮಂಡೆಕೋಲು ಗ್ರಾಮದ ಬಾಯ್ಕೋಡಿ-ಚೇರ್ದಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಯು ೧೦ಲಕ್ಷ ವೆಚ್ಚ ಮತ್ತು ಮಂಡೆಕೋಲು ಬೆಂಗತ್ತಮಲೆ ಕಾಲೋನಿ ರಸ್ತೆಗೆ ೫.೫ ಲಕ್ಷ ಅನುದಾನದಡಿಯಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಜಯರಾಜ್ ಕುಕ್ಕೆಟ್ಟಿ, ವಿನುತ ಪಾತಿಕಲ್ಲು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಮತ ಬೊಳುಗಲ್ಲು, ಪ್ರಮುಖರಾದ ಅನಿಲ್ ತೊಟಪ್ಪಾಡಿ, ಸುಬೋದ್ ಶೆಟ್ಟಿ ಮೆನಾಲ, ಶಿವಪ್ರಸಾದ್ ಉಗ್ರಾಣಿಮನೆ, ಉದಯ ಆಚಾರ್, ಪ್ರಮುಖ ಕಾರ್ಯಕರ್ತರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.


































