Home ಜಿಲ್ಲೆ ಮೈಸೂರು ಭೀಮನ ಅಮಾವಾಸ್ಯೆ ವಿಶೇಷ ಮಲೆ ಮಾದಪ್ಪನಿಗೆ ವಿಶೇಷ ಪೂಜೆ

ಭೀಮನ ಅಮಾವಾಸ್ಯೆ ವಿಶೇಷ ಮಲೆ ಮಾದಪ್ಪನಿಗೆ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ
ಹನೂರು ಆ 13 :-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಜಿಲ್ಲೆ ತಾಲೂಕು ಸೇರಿದಂತೆ ರಾಜ್ಯ ತಮಿಳುನಾಡು ವಿವಿಧ ಭಾಗಗಳಿಂದ ಸಹಸ್ರಾರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ಮಲೆ ಮಾದಪ್ಪನ ದರ್ಶನ ಪಡೆದು ಎಣ್ಣೆ ಮಜ್ಜನ ಸೇವೆ ಪೂಜೆ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದ್ದಾರೆ.


ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆಯ ಪ್ರಯುಕ್ತವಾಗಿ ಮಾದೇಶ್ವರ ಸ್ವಾಮಿಗೆ ವಿಷೇಶ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬೇಡಗಂಪಣ ವಿಧಿ ವಿದಾನಗಳಲ್ಲಿ ಸರಧಿ ಸಾಲಿನ ಅರ್ಚಕರಿಂದ ಸ್ವಾಮಿಗೆ ವಿಷೇಶ ಪೂಜೆಯನ್ನು ನೆವೇರಿಸಿದ ನಂತರ ಭಕ್ತರ ಸರ್ವ ಧರ್ಶನಕ್ಕೆ ಅನುವು ಮಾಡಿಕೊಡಲಾಯಿತು.


ಭೀಮನ ಅಮಾವಾಸ್ಯೆ ಪ್ರಯುಕ್ತ ಮಂಗಳವಾರದಂದು ಮಹದೇಶ್ವರ ಸ್ವಾಮಿಗೆ ಸರಗೂರು ಶರಣಯ್ಯ ವಂಶಸ್ಥರು ಎಣ್ಣೆ ಮಜ್ಜನ ಸೇವೆ ನೆರವೇರಿಸಿದರು. ಇಂದು ಬುಧವಾರ ಬೇಡಗಂಪಣ ಅರ್ಚಕರು ಸಾಂಪ್ರಾದಾಯಿಕ ವಿಶೇಷ ಪೂಜೆ ಸಲ್ಲಿಸಿ ಮಹದೇಶ್ವರನ ಲಿಂಗಕ್ಕೆ ಮಹಾ ಮಜ್ಜನ ನೆರವೇರಿಸಿ ಗಂಧಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ ಮಾಡಲಾಯಿತು.


ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದಪ್ಪನ ಸನ್ನಿಧಿ ಗರ್ಭಗುಡಿ ದರ್ಶನ ಒಳಾಂಗಣ ದೇವಾಲಯದ ಸುತ್ತಲು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುವಂತೆ ಅಲಂಕಾರ ಮಾಡಿ ಭಕ್ತಾದಿಗಳ ಕಣ್ಮಣ ಸೆಳೆಯುವಂತಿದೆ. ಇದು ತಮಿಳುನಾಡಿನ ಹೊಸೂರು ಮೂಲದ ಭಕ್ತರಾದ ರೋಸ್ ರಮೇಶ್ ಎಂಬವರು 15 ಲಕ್ಷ ರೂ. ವೆಚ್ಚದಲ್ಲಿ 1 ಲಾರಿ ಹೂವುಗಳಿಂದ ಪುಷ್ಪಲಂಕಾರ ಮಾಡಿಸಿ ಸೇವೆ ಸಲ್ಲಿಸಿದ್ದಾರೆ.


ಭೀಮನ ಅಮಾವಾಸ್ಯೆಗೆ ಮಾದಪ್ಪನ ಬೆಟ್ಟದಲ್ಲಿ ಜನಸಾಗರ
ಗರ್ಭಗುಡಿ, ರಾಜಗೋಪುರ, ದೇವಾಲಯದ ಹೊರಾಂಗಣ, ರುದ್ರಾಕ್ಷಿ ಮಂಟಪ, ಬಸವ ವಾಹನ ಹಾಗೂ ರಥೋತ್ಸವ ಮಾರ್ಗವನ್ನು ಲಿಲಿಯಂ, ಆರ್ಕಿಡ್, ಕಾರ್ನೇಷನ್, ಜರ್ಬೆರಾ, ಡೈಸಿ, 5 ಬಗೆಯ ಗುಲಾಬಿಗಳು ಸೇರಿದಂತೆ ಒಟ್ಟು 20 ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿತ್ತು.
ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಎರಡು ದಿನಗಳಿಂದ ರಾಜ್ಯದ ನಾನಾ ಭಾಗದಿಂದ ಬಂದ ಭಕ್ತರು, ಸರತಿ ಸಾಲಿನಲ್ಲಿ ನಿಂತು ಮಾದಪ್ಪನನ್ನು ಕಣ್ತುಂಬಿಕೊಂಡು ಉಘೇ ಉಘೇ ಮಾದಪ್ಪ ಘೋಷವಾಕ್ಯ ಮೊಳಗಿಸಿದರು. ಹರಕೆ ಹೊತ್ತ ಭಕ್ತರು ದೇವಾಲಯದ ಸುತ್ತಲೂ ಪ್ರದಕ್ಷಣೆಯಾಗಿ ಪಂಜಿನ ಸೇವೆ. ಉರುಳು ಸೇವೆ. ಮುಡಿಸೇವೆ. ದೂಪ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಹುಲಿವಾಹನ, ಬೆಳ್ಳಿ ರಥೋತ್ಸವ, ದೂಪದ ಸೇವೆ ಇನ್ನಿತರ ಸೇವೆಗಳಲ್ಲಿ ಪಾಲ್ಗೊಂಡು ಮಾದಪ್ಪನ ಕೃಪೆಗೆ ಪಾತ್ರರಾದರು.


ಅಮಾವಾಸ್ಯೆಯ ನಿಮಿತ್ತ ದೇವಾಲಯಕ್ಕೆ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರಿಗೆ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ನಿರಂತರ ಅನ್ನ ದಾಸೋಹ, ಧರ್ಮ ದರ್ಶನವಲ್ಲದೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯನ್ನು ಸರದಿ ಸಾಲಿನ ವ್ಯವಸ್ಥೆ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿತ್ತು.
ಚಾಮರಾಜನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾಡಲಾಗಿದ್ದು ಭಕ್ತಾದಿಗಳಿಗೆ ವಿಶೇಷ ಹೆಚ್ಚುವರಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.