
ಬೆಂಗಳೂರು, ಜೂ2: ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಎಂಇಸಿ ಇಮೇಜಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೆಂಗಳೂರಿನ ಹಿಲ್ಟನ್ ಬೆಂಗಳೂರು ಎಂಬಸಿ ಮನ್ಯತಾ ಬಿಸಿನೆಸ್ ಪಾರ್ಕ್‍ನಲ್ಲಿ ನಾಯಕತ್ವ ಸಮಾವೇಶ ಹಾಗೂ ನೂತನ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಗೌರವಾನ್ವಿತ ಜಸ್ಟಿಸ್ ಜಿ.ಆರ್. ಸ್ವಾಮಿನಾಥನ್, ಡಿಲಾಯಿಟ್ ಇಂಡಿಯಾದ ಹಿರಿಯ ಸಲಹೆಗಾರ ಹಾಗೂ ಮಾಜಿ ಸಿಬಿಐಸಿ ಸದಸ್ಯ ಡಿ.ಪಿ. ನಾಗೇಂದ್ರ ಕುಮಾರ್, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ , ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ Sಂಒಇಇಖ ಸಂಸ್ಥೆಯ ಮಹಾನಿರ್ದೇಶಕ ಡಾ. ಪಿ. ಹನುಮಂತ ರಾವ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಸ್ಟಿಸ್ ಜಿ.ಆರ್. ಸ್ವಾಮಿನಾಥನ್ ಅವರು ಬಿಎಂಇಸಿ ಸಂಸ್ಥೆಯ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಸೇವಾ ಉತ್ಪನ್ನವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಬಿಎಂಇಸಿ ಇಮೇಜಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕೈಗೆಟಕುವ, ಸುಲಭವಾಗಿ ಲಭ್ಯವಾಗುವ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವೈದ್ಯಕೀಯ ಚಿತ್ರಣ ಮತ್ತು ಆರೋಗ್ಯ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಸುಧಾರಿತ ಡಯಾಗ್ನೋಸ್ಟಿಕ್ ಇಮೇಜಿಂಗ್ ವ್ಯವಸ್ಥೆಗಳು, ಆರೋಗ್ಯ ಮೂಲಸೌಕರ್ಯ ಪರಿಹಾರಗಳು, ಸ್ಥಾಪನೆ ಮತ್ತು ಕಾರ್ಯಾರಂಭ ಸೇವೆಗಳು, ಮಾರಾಟೋತ್ತರ ತಾಂತ್ರಿಕ ಬೆಂಬಲ, ನಿರ್ವಹಣೆ, ತರಬೇತಿ ಹಾಗೂ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳೊಂದಿಗೆ ಕಾರ್ಯತಂತ್ರದ ಸಹಭಾಗಿತ್ವಗಳನ್ನು ಹೊಂದಿದೆ.
ಈ ನಾಯಕತ್ವ ಸಮಾವೇಶವು ಆರೋಗ್ಯ ಕ್ಷೇತ್ರದ ತಜ್ಞರು, ಉದ್ಯಮ ನಾಯಕರು ಹಾಗೂ ಪಾಲುದಾರರಿಗೆ ಪರಸ್ಪರ ಸಂವಾದ ನಡೆಸಲು, ಆರೋಗ್ಯ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳ ಕುರಿತು ಚರ್ಚಿಸಲು ಹಾಗೂ ಭವಿಷ್ಯದ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಿತ್ತು.
ನೂತನ ಎಐ ಆಧಾರಿತ ಆರೋಗ್ಯ ಸೇವಾ ಉತ್ಪನ್ನದ ಬಿಡುಗಡೆ ಮೂಲಕ ಬಿಎಂಇಸಿ ಇಮೇಜಿಂಗ್ ಸಂಸ್ಥೆಯು ಭಾರತದ ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದ್ದು, ದೇಶದ ಆರೋಗ್ಯ ಸೇವಾ ವ್ಯವಸ್ಥೆಯನ್ನು ಆಧುನೀಕರಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.























