Home ಜಿಲ್ಲೆ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಸೆ,27- ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಕರಡಿ ಸಕ್ಕರೆ ಕರಡೀಶ ಪ್ರಸಾದ್ ನಿಲಯದಲ್ಲಿ .

ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಗುರುಬಸಪ್ಪ ರೂಡಿ  , ಜಿಲ್ಲಾ ಅಧ್ಯಕ್ಷ ಮರಿರಾಜಗೌಡ ಅವರ ನೇತೃತ್ವದಲ್ಲಿ ನಡೆಯಿತು.

ಮಲ್ಲಿಕಾರ್ಜುನ ರೂಡಿ ಅವರು ಮಾತನಾಡಿ, ಸಮಾಜದ ಏಳಿಗೆಗಾಗಿ ಮಹಿಳಾ ಘಟಕ ಸೇರಿದಂತೆ ಎಲ್ಲಾ ಘಟಕಗಳ ಪದಾಧಿಕರಿಗಳು, ಸದಸ್ಯರು ಶ್ರಮಿಸಬೇಕು.ಪದಗ್ರಹಣ ಮಾಡಿದವರು ಸದಾ ಸೇವಾ ಮನೋಭಾವದಿಂದ ಕೂಡಿರಬೇಕು ಎಂದರು.

ಇಂದು ಯಾವುದೇ ಸಮಾಜ ಸಂಘಟನೆಯಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಜೊತೆಗೆ ರಾಜಕೀಯವಾಗಿಯೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ.

ಈ ವರೆಗೆ 2002 ರಿಂದ ಇಲ್ಲಿವರೆಗೆ 10 ಸಾವಿರ ಜನ ಸದಸ್ಯರಿದ್ದರು. ಆದರೆ ಇಗ ನಾವು ಮತ್ತೆ ಹತ್ತು ಸಾವಿರ ಸದಸ್ಯರನ್ನು ಮಾಡಿ ಸಂಘಕ್ಕೆ ಒಂದು ಕೋಟಿರೂ ನಿಧಿ ಸಂಗ್ರಹವಾಗಿದೆ. ನಾವು ನಮ್ಮಬಣಜಿಗ ಸತ್ವವನ್ನು ಉಳಿಸಿಕೊಳ್ಳಬೇಕು. ದಾಸೋಹ ಸಮಾನತೆ ಜೊತೆಗೆ ಕಾಯಕ ಮುಖ್ಯ ಆಗಬೇಕು ಎಂದು ಕರೆಕೊಟ್ಟರು.

ಸಮಾರಂಭದಲ್ಲಿ  ಅಖಿಲ ಭಾರತ ವೀರಶೈವ ಮಹಾಸಭಾದದ ಆಂದ್ರಪ್ರದೇಶದ ರಾಜ್ಯ ಅಧ್ಯಕ್ಷ ದಂಡಿನ ಶಿವಾನಂದ,  ಸಂಘದ ಗೌರವ ಅಧ್ಯಕ್ಷ ರೂಪನಗುಡಿ ಬಸವರಾಜ್, ಮಾಜಿ  ಜಿಲ್ಲಾ ಅಧ್ಯಕ್ಷ ಕೋರಿ ವಿರೂಪಾಕ್ಷಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪಲ್ಲೇದ ಮೈತ್ರಿ ಬಸವರಾಜ್, ಸಮಾಜದ ಮುಖಂಡರಾದ ಪಲ್ಲೇದ ಪಂಪಾಪತೆಪ್ಪ ಅಲ್ಲಂ ಪ್ರಶಾಂತ್ ಮೊದಲಾದವರು ಇದ್ದರು.

ಇಂದಿನ ಸಮಾರಂಬದಲ್ಲಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಡಾ.ಚೇತನಾ,  ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸವಿತಾ ಸೋನಾಲಿ,  ಸಹಕಾರ್ಯದರ್ಶಿ ರೇಖಾ ಡಾ.ವೀರೇಂದ್ರ, ಖಜಾಂಚಿಯಾಗಿ ಪೂಜಾ ಮೃತ್ಯುಂಜಯ ಬಾಬು, ನಗರ ಅಧ್ಯಕ್ಷರಾಗಿ ಬಾಡದ ವಿದ್ಯಾ ಬದ್ರಿನಾಥ್, ಉಪಾಧ್ಯಕ್ಷರಾಗಿ ನಿಷ್ಟಿ ಲತಾ, ಪ್ರದಾನ ಕಾರ್ಯದರ್ಶಿಯಾಗಿ  ವಿಜಯ್ ಮಹಾಂತೇಶ್ , ಕಾರ್ಯದರ್ಶಿಯಾಗಿ ಶಿಲ್ಪ ಶ್ರೀ,  ಗ್ರಾಮಿ೮ಣ ಘಟಕದ ಅಧ್ಯಕ್ಷರಾಗಿ ನಾಗರತ್ನಮ್ಮ, ಉಪಾಧ್ಯಕ್ಷರಾಗಿ ಆನೇರೂಪ, ಪ್ರಧಾನ ಕಾರ್ಯದರ್ಶಿಯಾಗಿ ಮೋಕ್ಷಮ್ಮ, ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷರಾಗಿ ಸುಳುವಸಯಿನಪ್ರೇಮ ಎರ್ರೆಪ್ಪ, ಉಪಾಧ್ಯಕ್ಷರಾಗಿ ದಿವ್ಯ ವಿನಯ್, ಪ್ರಧಾನ ಕಾರ್ಯದರ್ಶಿಯಾಗಿ ವಿನುತಾ ಕರಿಬಸವರಾಜ್, ಕಂಪ್ಲಿ ತಾಲೂಕು ಅಧ್ಯಕ್ಷರಾಗಿ ಚೈತ್ರ ಪ್ರಸಾದ್, ಉಪಾಧ್ಯಕ್ಷರಾಗಿ ವಿನುತಾ ಯುಗಾದಿ, ಜಿಲ್ಲಾ ಯುಘಟಕದ ಅಧ್ಯಕ್ಷರಾಗಿ ಕುರೆಟ್ಟಿ ರಾಜಶೇಖರ, ಉಪಾಧ್ಯಕ್ಷರಾಗಿ ಕರಣಂ ಮಹಾಂತೇಶ್, ಪ್ರಧಾನ ಕಾರ್ಯದರ್ಶಿಯಾಗಿ ಅಂಗಡಿ ರಾಜಶೇಖರ ಸಿರಿವಾರ, ಕಾರ್ಯದರ್ಶಿಯಾಗಿ ಕೆ.ರಾಜಶೇಖರ್, ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನಾಗಭೂಷಣ(ಅಪ್ಪಯ್ಯ) , ಕಾರಪುಡಿ ಮುದ್ದನಗೌಡ, ತಿಪ್ಪೇಸ್ವಾಮಿ ಕಂಪ್ಲಿ, ಸಿದ್ದಲಿಂಗಪ್ಪ, ಸೂಗೂರು, ಪ್ರಧಾನ ಕಾರ್ಯದರ್ಶಿಯಾಗಿ ಶಿವರಮೇಶ್, ಖಜಾಂಚಿಯಾಗಿ ಸಣ್ಣ ರಂಗಪ್ಪ, ಜಿಲ್ಲಾ ಕಾರ್ಯದರ್ಶಿಯಾಗಿ ಎನ್.ಮಂಜುನಾಥಗೌಡ,  ಸಹಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನಗೌಡ ರೂಪನಗುಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಂಗಡಿ ಚಿದಾನಂದ, ವಿ.ಕೆ.ತಿಪ್ಪೇಶಗೌಡ, ಸಂಡೂರು ತಾಲೂಕು ಅಧ್ಯಕ್ಷರಾಗಿ ಗುಡೇಕೋಟೆ ನಾಗರಾಜ್, ಯುವ ಅಧ್ಯಕ್ಷರಾಗಿ ಮಂಜುನಾಥ ಸಿರಿಗೇರಿ, ಕುರುಗೋಡು ಅಧ್ಯಕ್ಷರಾಗಿ ಹೆಚ್.ಹೇಮಾದ್ರಿ,  ಯುವ ಘಟಕದ ಅಧ್ಯಕ್ಷರಾಗಿ ಬಿ.ವೀರಭದ್ರಪ್ಪ,  ಬಳ್ಳಾರಿ ಗ್ರಾಮೀಣ ಅದ್ಯಕ್ಷರಾಗಿ ಬಿ.ಬಸವರಾಜ್,  ಯುವ ಅಧ್ಯಕ್ಷರಾಗಿ ಕೆ.ಪಿ.ನಂದೀಶ್ ಎತ್ತಿನಬೂದಿಹಾಳ್, ಸಿರುಗುಪ್ಪ ತಾಲೂಕು ಅಧ್ಯಕ್ಷರಾಗಿ ಹೆಚ್.ಷಡಕ್ಷರಪ್ಪ,  ಕಂಪ್ಲಿ ತಾಲೂಕು ಅಧ್ಯಕರಾಗಿ ಗಡಾದ್ ವೆಂಕಟೇಶ್ ಪ್ರಸಾದ್ ಇವರು ಇಂದು ಪದಗ್ರಹಣ ಸ್ವೀಕರಿಸಿದರು.