
ಬಜ್ಪೆ: ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೇಲ್‌ಕೋಡಿ ಎಂಬಲ್ಲಿ ರವಿವಾರ ರಾತ್ರಿ ಜಿ.ಕೆ. ನೋಣಯ್ಯ ಪೂಜಾರಿ ಎಂಬವರ ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದು, ಜನರಲ್ಲಿ ಭಯದ ಭೀತಿ ಹುಟ್ಟಿಸಿದ್ದ ಚಿರತೆಯೆ ಸೆರೆಗೆ ಅರಣ್ಯ ಇಲಾಖೆ ಮಂಗಳವಾರ ಬೆಳಗ್ಗೆ ಮನೆಯ ಬಳಿ ಬೋನು ಇರಿಸಿದೆ.
ರಾತ್ರಿ ವೇಳೆ ಬೋನಿನೊಳಗೆ ನಾಯಿ ಅಥವಾ ಕೋಳಿ ಇಡುವಂತೆ ಇಲಾಖೆ ಸಿಬ್ಬಂದಿ ಮನೆಯವರಿಗೆ ಸೂಚಿಸಿದ್ದಾರೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.
ಅ.೯ರಂದು ರಾತ್ರಿ ಜಿ.ಕೆ. ನೋಣಯ್ಯ ಪೂಜಾರಿಯವರ ಜಿ.ಕೆ. ನಿವಾಸದ ಜಗುಲಿಯಲ್ಲಿದ್ದ ನಾಯಿಯೊಂದನ್ನು ಚಿರತೆ ಕೊಡೊಯ್ದಿತ್ತು. ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದು ಪೆರ್ಮುದೆ ಸೇರಿದಂತೆ ಬಜ್ಪೆಯ ಜನರಲ್ಲಿ ಆತಂಕದ ಜೊತೆಗೆ ಭಯವನ್ನು ಹುಟ್ಟಿಸಿತ್ತು.


































