Home ಜಿಲ್ಲೆ ಬೆಂಗಳೂರು ಬಂಡವಾಳ ಹೂಡಿಕೆಗೆ ರೇವಂತ್ ರೆಡ್ಡಿ ಜೊತೆ ಸುಧೀಂದ್ರ ಚರ್ಚೆ

ಬಂಡವಾಳ ಹೂಡಿಕೆಗೆ ರೇವಂತ್ ರೆಡ್ಡಿ ಜೊತೆ ಸುಧೀಂದ್ರ ಚರ್ಚೆ

ಬೆಂಗಳೂರು, ಜೂ. 13- ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ.ಸುಧೀಂದ್ರ ಅವರು ನಿನ್ನೆ ರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿನ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಿಂದ ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ವಾಪಸ್ ಬೆಂಗಳೂರು ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಅವರನ್ನು ಬರ ಮಾಡಿಕೊಂಡು ಆತಿಥ್ಯ ನೀಡಿ ಸತ್ಕರಿಸಿದರು.

ಎಸ್. ಈ.ಸುಧೀಂದ್ರ ಅವರು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಜೈವಿಕ ಇಂಧನ ಕಾರ್ಯ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಬಂಡವಾಳ ಹೂಡಿಕೆ ಮಾಡಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಿ ತೆಲಂಗಾಣ ರಾಜ್ಯದಲ್ಲಿನ ವಾಸ್ತವಿಕ ಸ್ಥಿತಿಗತಿಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ತೆಲಂಗಾಣ ರಾಜ್ಯದಲ್ಲಿ ಶುದ್ಧ ಮತ್ತು ಹಸಿರು ಇಂಧನ ಗಳಾದ ಜೈವಿಕ ಇಂಧನ ಕಾರ್ಯ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯು ತೆಲಂಗಾಣ ಪುನರುತ್ಪಾದಿಸಲ್ಪಡುವ ಇಂಧನಗಳ ಅಭಿವೃದ್ಧಿ ನಿಗಮ ನಿಯಮಿತ ಕೈಗೊಂಡಿದ್ದು ಎ. ರೇವಂತ್ ರೆಡ್ಡಿ ಅವರು ತೆಲಂಗಾಣ ರಾಜ್ಯದಲ್ಲಿನ ಜೈವಿಕ ಇಂಧನ ನೀತಿಯ ಅನುಷ್ಠಾನ ಪ್ರಕ್ರಿಯೆ ಕುರಿತು ಆ ರಾಜ್ಯದ ಆರ್ಥಿಕ, ಯೋಜನೆ ಮತ್ತು ಇಂಧನ ಸಚಿವರನ್ನು ಭೇಟಿಯಾಗಿ ಪರಸ್ಪರ ಸಹಕಾರದಿಂದ ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳು ಜೈವಿಕ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಅಗತ್ಯ ಮಾರ್ಗೋಪಾಯಗಳನ್ನು ಹಾಗೂ ಒಡಂಬಡಿಕೆ ಕುರಿತು ನಿರ್ಧಾರ ಕೈಗೊಳ್ಳಲು ಸಲಹೆ ನೀಡಿದರು.

ಮಂಡಳಿಯ ಅಧ್ಯಕ್ಷರು ತಾವು ಕೂಡಲೇ ಕಾರ್ಯಕರ್ತರರಾಗಿ ರಾಜ್ಯ ಸರ್ಕಾರದ ನಿಯೋಗದೊಂದಿಗೆ ತೆಲಂಗಾಣ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಆರ್ಥಿಕ, ಯೋಜನೆ ಹಾಗೂ ಇಂಧನ ಇಲಾಖೆ ಸಚಿವರಾದ ಮಲ್ಲು ಭಾಟಿ ವಿಕ್ರಮಾರ್ಕ ಅವರನ್ನು ಭೇಟಿಯಾಗಿ ಚರ್ಚಿಸಿ ಮುಂದಿನ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ತಿಳಿಸಿದರು.