Home ಜಿಲ್ಲೆ ಮಂಗಳೂರು ಪುತ್ತೂರು ಶಿವಳ್ಳಿ ಸಂಪದ ನೂತನ ಗೌರವಾಧ್ಯಕ್ಷರಾಗಿ ಬಲರಾಮ ಆಚಾರ್ಯ

ಪುತ್ತೂರು ಶಿವಳ್ಳಿ ಸಂಪದ ನೂತನ ಗೌರವಾಧ್ಯಕ್ಷರಾಗಿ ಬಲರಾಮ ಆಚಾರ್ಯ

ಪುತ್ತೂರು : ಪುತ್ತೂರಿನ ಹೆಸರಾಂತ ಸ್ವರ್ಣೋದ್ಯಮಿ ದಿ. ಜಿ.ಎಲ್. ಆಚಾರ್ಯ ಅವರ ಪುತ್ರ ಹಾಗೂ ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಪುತ್ತೂರು ಶಿವಳ್ಳಿ ಸಂಪದದ ಗೌರವಾಧ್ಯಕ್ಷರಾಗಿದ್ದ, ಹಿರಿಯ ವಕೀಲ ಹಾಗೂ ಸಾಮಾಜಿಕ ಮುಂದಾಳು ಎನ್ ಸುಬ್ರಹ್ಮಣ್ಯ ಕೊಳತ್ತಾಯರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಧರ್ಮ ಮತ್ತು ಶಿಕ್ಷಣ ಪ್ರೇಮಿಯೂ ಆಗಿರುವ ಬಲರಾಮ ಆಚಾರ್ಯರು ವಿಜಯರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಇವರನ್ನು ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸತೀಶ್ ಮುಡಂಬಡಿತಾಯ, ಕಾರ್ಯದರ್ಶಿ ಬಾಲಚಂದ್ರ ಮುಚ್ಚಿನ್ತಾಯ, ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ, ಕೋಶಾಧಿಕಾರಿ ಕೃಷ್ಣರಾಜ ಎರಕಡಿತಾಯ, ನಿಕಟ ಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಪೂರ್ವ ಅಧ್ಯಕ್ಷ ಕೆ ಆರ್ ಆಚಾರ್,ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ನೆಲ್ಯಾಡಿ ವಲಯದ ರವಿಪ್ರಸಾದ್ ಆಚಾರ್ ಮುಂತಾದವರು ಆಚಾರ್ಯರ ಕಛೇರಿಗೆ ತೆರಳಿ ಅಭಿನಂದಿಸಿದರು.