Home ಸುದ್ದಿ ರಾಷ್ಟ್ರೀಯ ಪರ್ಯಟನೆ, ಪ್ರವಾಸ ಯಶಸ್ಸಿಗೆ ಕರೆ

ಪರ್ಯಟನೆ, ಪ್ರವಾಸ ಯಶಸ್ಸಿಗೆ ಕರೆ

ಕೆ.ಆರ್.ಪುರ, ನ.14- ಮಹದೇವಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರ್ಯಟನೆ ಮತ್ತು ಪ್ರವಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಕರೆ ನೀಡಿದರು.

ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಏರ್ಪಡಿಸಿದ್ದ ಡಿ.ಕೆ.ಶಿವಕುಮಾರ್ ಅವರ ಪರ್ಯಟನೆ ಮತ್ತು ಪ್ರವಾಸ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಚಿಕ್ಕಬೆಳ್ಳಂದೂರು,ಗುಂಜೂರಿನಲ್ಲಿ 800ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದು,ಇದರಿಂದ ಈ ಭಾಗದಲ್ಲಿನ ಮಳೆಹಾನಿ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿಖಾನ್ ಅವರು ಮಾತನಾಡಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಮ್ಮೆಲ್ಲರ ಕಾರ್ಯಕ್ರಮವಾಗಿದ್ದು,ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನವಾಗಬೇಕು ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿಯ ಅರ್ಧಭಾಗವಾದ 400 ಕೋಟಿ ಹಣ ಬಿಡುಗಡೆಯಾಗಿದ್ದು,ತ್ವರಿತಗತಿಯಲ್ಲಿ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್,
ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್,ರಾಮಕೃಷ್ಣಪ್ಪ,ಗ್ಯಾರಂಟಿ ಅಧ್ಯಕ್ಷರಾದ ಪ್ರಶಾಂತ್, ಸುರೇಶ್,
ಒಬಿಸಿ ಅಧ್ಯಕ್ಷ ಕುಪ್ಪಿ ಮಂಜುನಾಥ,ಬ್ಲಾಕ್ ಅಧ್ಯಕ್ಷರಾದ ಶ್ರೀನಿವಾಸಗೌಡ,ವಿನೋದ,ಮಾಜಿ ಅಧ್ಯಕ್ಷ ಬಾಬುಗೌಡ,ಮುಖಂಡರಾದ ಎಂಸಿಸಿ ರವಿ,ಗಫರ್ ಬೇಗ್ ಇದ್ದರು.