Home ಜಿಲ್ಲೆ ನ. ೩೦ರಂದು ಕೂಡ್ಲಿಗಿಯಲ್ಲಿ ವಾಲ್ಮೀಕಿ ಜಯಂತಿ ಅದ್ದೂರಿ, ಬೈಕ್ ರ್ಯಾಲಿ, ರಕ್ತದಾನ ಶಿಬಿರ.

ನ. ೩೦ರಂದು ಕೂಡ್ಲಿಗಿಯಲ್ಲಿ ವಾಲ್ಮೀಕಿ ಜಯಂತಿ ಅದ್ದೂರಿ, ಬೈಕ್ ರ್ಯಾಲಿ, ರಕ್ತದಾನ ಶಿಬಿರ.


ಸಂಜೆವಾಣಿ ವಾರ್ತೆ

ಕೂಡ್ಲಿಗಿ. ನ. ೨೭ :- ಪಟ್ಟಣದಲ್ಲಿ ಇದೇ ೩೦ ನೇ ತಾರೀಕಿನoದು ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ ಅವರ ಕೂಡ್ಲಿಗಿ ತಾಲೂಕು ಮಟ್ಟದ ಜಯಂತಿಯನ್ನು ಆಚರಿಸಲಿದ್ದು ರಾಜ್ಯದಲ್ಲಿ ಪ್ರಥಮ ಎನ್ನುವ ಹಾಗೇ ಪಿಓಪಿ ವಾಲ್ಮೀಕಿ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮಾಡಿ, ವಾಲ್ಮೀಕಿ ಬಾವುಟ ಕಟ್ಟಿಕೊಂಡ ಬೈಕ್ ರ್ಯಾಲಿ ಮತ್ತು ವಾಲ್ಮೀಕಿ ಜಯಂತಿ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಜೊತೆಗೆ ಇತರೆ ಕಾರ್ಯಕ್ರಮವನ್ನು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಕೂಡ್ಲಿಗಿ ತಾಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಎಸ್ ಸುರೇಶ ತಿಳಿಸಿದರು.
ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಅಂದು ಪಟ್ಟಣದ ಶ್ರೀ ವಾಲ್ಮೀಕಿ ದೇವಸ್ಥಾನದ ಮೂಲಕ ಮೆರವಣಿಗೆ ಪ್ರಾರಂಭವಾಗಲಿದ್ದು ಕೊನೆಗೆ ಮೇನ್ ಬಾಯ್ಸ್ ಸ್ಕೂಲ್ ಆವರದಲ್ಲಿ ನಡೆಸಲಾಗುವುದು ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಸ್ವಾಮೀಜಿ ವಹಿಸಲಿದ್ದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾದ ಟಿ ರಘುಮೂರ್ತಿ ನೆರವೇರಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ,ಸಂಸದ ಈ ತುಕಾರಾಂ, ಮಾಜಿ ಸಚಿವ ಶ್ರೀರಾಮುಲು, ಕೆ ಎನ್ ರಾಜಣ್ಣ, ಮೊಳಕಾಲ್ಮುರು ಶಾಸಕ ಎನ್ ವೈ ಗೋಪಾಲಕೃಷ್ಣ, ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ, ಕಂಪ್ಲಿ ಶಾಸಕ ಎನ್ ಗಣೇಶ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.ವಿಶೇಷ ಕಾರ್ಯಕ್ರಮದ ಉಪನ್ಯಾಸಕರಾಗಿ ಡಿಐಜಿ ರವಿ ಡಿ ಚನ್ನಣ್ಣನವರ್ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಎಸ್ ಸುರೇಶ ತಿಳಿಸಿದರು.ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಯಂತಿಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾದ ಮಾಜಿ ಅಧ್ಯಕ್ಷ ಜಯರಾಂ ನಾಯಕ, ಬಿ. ಭೀಮೇಶ, ಕಾಟೆರ್ ಹಾಲೇಶ, ಗುರಿಕಾರ ರಾಘವೇಂದ್ರ, ಮಲ್ಲಾಪುರದ ನಾಗರಾಜ, ಮಂಜು ಮಯೂರ, ಪ ಪಂ ಮಾಜಿ ಸದಸ್ಯರಾದ ಈಶಪ್ಪ, ಸಿರಿಬಿ ಮಂಜುನಾಥ, ಡಾಣಿ ರಾಘವೇಂದ್ರ, ಅಜೇಯ ಕುಮಾರ,ಶಾಮಿಯಾನ ಚಂದ್ರಪ್ಪ, ಹನುಮಂತಪ್ಪ, ಅಜೇಯ ರಾಮಸಾಲಿ ಸೇರಿದಂತೆ ಇತರೆ ಸಮುದಾಯದ ಯುವಮುಖಂಡರು ಹಾಜರಿದ್ದರು.