ನೆಲನೆಲ್ಲ ಬಗ್ಗೆ ಗೊತ್ತೆ

ನೆಲನೆಲ್ಲಿ ಗಿಡ ಅನೇಕರೋಗಗಳಿಗೆ ರಾಮಾಬಾಣವಾಗಿದೆ.ಕೆಲದಿನಗಳ

ಕಾಲ ನಿತ್ಯ ಬಳಕೆ ಮಾಡಿದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತಂಪುಗುಣ ಹೊಂದಿರುವ ಕಾರಣ ಬೇಸಿಗೆಯಲ್ಲೂ ಉಷ್ಣವಾಗುವ ಭಯವಿಲ್ಲದೇ ಬಳಸಬಹುದು.

ದೇಹದಲ್ಲಿ ಉರಿ, ಮೂತ್ರದ ಸಮಸ್ಯೆಗಳು, ಪದೇ ಪದೇ ಬರುವ ಜ್ವರ, ನೆಗಡಿಗಳನ್ನು ಕಡಿಮೆ ಮಾಡುತ್ತದೆ.

ರಕ್ತವನ್ನು ಶುದ್ಧಿಗೊಳಿಸಿಗಾಯಗಳನ್ನು ಬೇಗ ಗುಣಗೊಳಿಸುತ್ತದೆ. ಚರ್ಮರೋಗಗಳೂ ಬೇಗ ಗುಣವಾಗುವಂತೆ ಮಾಡುತ್ತದೆ.

ಮೂತ್ರಮಾರ್ಗದ ವಿಕಾರಗಳನ್ನು ಗುಣಪಡಿಸಿ ಸರಾಗ ಮೂತ್ರವಾಗುವಂತೆ ಮಾಡುತ್ತದೆ.

ಮೂಳೆ ಮುರಿತದಲ್ಲೂ ಇದನ್ನು ಬಳಸಬಹುದು.

ಲಿವರ್ ಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಲ್ಲಿ ಅತ್ಯಂತ ಸಹಕಾರಿ

ಜಾಂಡೀಸ್, ಲಿವರ್ ಅಥವಾ ಸ್ಟೀನ್ ನಬಾವು ಮುಂತಾದ ಸಮಸ್ಯೆಗಳಲ್ಲಿ ಇಡೀ ಗಿಡವನ್ನು ತಂದು ಅತ್ಯಲ್ಪ ನೀರು ಬಳಸಿ ೧೫ರಿಂದ ೨೦ ಮಿಲೀ ರಸ ತೆಗೆದು ಅದನ್ನು ಕೆಲದಿನಗಳ ಕಾಲ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ತಾಜಾ ಗಿಡ ಸಿಗದೇ ಹೋದರೆ ಗ್ರಂಥಿಗೆ ಸಿಗುವ ಅಂಗಡಿಗಳಲ್ಲಿ ಒಣಗಿದ ಗಿಡದ ತುಂಡುಗಳನ್ನು ತಂದು ೧೦ ಗ್ರಾಂನಷ್ಟು ಪುಡಿಯನ್ನು ೧೫೦ ಮಿಲೀ ನೀರಿಗೆ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ೪೦ ಮಿಲೀಗೆ ಇಳಿಸಿ ಸೋಸಿ ಕುಡಿಯಬೇಕು. ಅದರನುಣ್ಣನೆಯ ಪುಡಿಯನ್ನು ಬಳಸುವುದಾದರೆ ದಿನಕ್ಕೆ೩ರಿಂದ ೬ಗ್ರಾಂಪುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬಹುದು. ಇದಕ್ಕಿಂತಲೂ ತಾಜಾ ರಸ ಅಥವಾ ಕಷಾಯ ಬಳಸುವುದು ಸೂಕ್ತ. ಇದರಿಂದ ಲಿವರ್ ನ ಕಾರ್ಯಕ್ಷಮತೆ ಹೆಚ್ಚಿಹಸಿವು ಚೆನ್ನಾಗಿ ಆಗುತ್ತದೆ.

ಚಿಕ್ಕ ಮಕ್ಕಳಿಗೂ ಕಡಿಮೆ ಪ್ರಮಾಣದಲ್ಲಿ ಕೊಡಬಹುದು. ಇದರಿಂದ ಮಕ್ಕಳಿಗೆ ಪದೇ ಪದೇ ಕಾಡುವ ನೆಗಡಿ, ಜ್ವರ, ಕೆಮ್ಮುಗಳು ಹತೋಟಿಗೆ ಬರುತ್ತವೆ. ಜೊತೆಗೆ ಬಾಯಿ ರುಚಿ ಹೆಚ್ಚಿ ಮಕ್ಕಳ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ.

ನಿತ್ಯಕುಡಿಯುವಹರ್ಬಲ್‌ಟೀಗಳಲ್ಲೂ ಇದನ್ನು ಬಳಸಬಹುದು. ಹೀಗೆ ಬಳಸುವುದರಿಂದ ಮೇಲೆ ಹೇಳಿದ ಸಮಸ್ಯೆಗಳು ಕಡಿಮೆಯಾಗುವುದೊಂದೇ ಅಲ್ಲ ಅವು ಇಲ್ಲದಿದ್ದರೆಬರದಂತೆಯೂ ತಡೆಯುತ್ತದೆ. ಮನೆಮುಂದೆ ಅಥವಾ ಟೆರೇಸ್ ನಲ್ಲಿ ಸ್ವಲ್ಪ ಜಾಗದಲ್ಲಿ ಬೆಳೆಸಿಕೊಂಡರೆ ವರ್ಷಪೂರ್ತಿ ಬಳಸಬಹುದು.