Home ಸುದ್ದಿ ರಾಷ್ಟ್ರೀಯ ತಿರುಪ್ಪರನ್‍ಕುಂದ್ರಂ ಬೆಟ್ಟದ ದರ್ಗಾದಲ್ಲಿ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

ತಿರುಪ್ಪರನ್‍ಕುಂದ್ರಂ ಬೆಟ್ಟದ ದರ್ಗಾದಲ್ಲಿ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

ಮದೂರೈ, ನ.28: ತಮಿಳುನಾಡಿನ ಮದುರೈ ಜಿಲ್ಲೆಯ ತಿರುಪ್ಪರನ್‍ಕುಂದ್ರಂ ಬೆಟ್ಟದಲ್ಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾಕ್ಕೆ ಇಂದು 100ಕ್ಕೂ ಹೆಚ್ಚು ಮುಸ್ಲಿಮರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸ್ಥಳೀಯರು ಸೇರಿದಂತೆ ಕೇರಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಪುರುಷರು, ಮಹಿಳೆಯರು ಮತ್ತು ಯುವಕರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಬೆಳಗ್ಗೆಯಿಂದಲೇ ಭಕ್ತರ ಸರತಿ ಸಾಲು
ಶನಿವಾರ ಬೆಳಗ್ಗೆ ಸುಮಾರು 6.15ರಿಂದಲೇ ದರ್ಗಾಕ್ಕೆ ತೆರಳಲು ಬೆಟ್ಟದ ತಪ್ಪಲಿನಲ್ಲಿ ಜನರು ಸೇರಲಾರಂಭಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಪೆÇಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.
ದರ್ಗಾಕ್ಕೆ ತೆರಳುವವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಯಿತು. ಬಳಿಕ ಪ್ರತಿಯೊಬ್ಬರನ್ನೂ ತೀವ್ರ ತಪಾಸಣೆಗೆ ಒಳಪಡಿಸಿ ಬೆಟ್ಟದ ಮೇಲಕ್ಕೆ ತೆರಳಲು ಅನುಮತಿ ನೀಡಲಾಯಿತು.


ದರ್ಗಾದಲ್ಲಿ ವಾರ್ಷಿಕ ಉರುಸ್ ಉತ್ಸವವನ್ನು ಡಿಸೆಂಬರ್ 10ರಂದು ಪ್ರತ್ಯೇಕವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ದಿನಗಳಲ್ಲಿಯೂ ಸುಮಾರು 100ರಿಂದ 200 ಮಂದಿ ದರ್ಗಾಕ್ಕೆ ಭೇಟಿ ನೀಡುತ್ತಾರೆ ಎಂದು ದರ್ಗಾ ಪರ ವಕೀಲರು ಸುಪ್ರೀಂ ಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ.
ಒಂದೇ ಬೆಟ್ಟದಲ್ಲಿ ದೇವಸ್ಥಾನದಲ್ಲಿ ಕಾರ್ತಿಕ ದೀಪೆÇೀತ್ಸವದ ಸಿದ್ಧತೆಗಳು ನಡೆಯುತ್ತಿರುವಾಗಲೇ ದರ್ಗಾದಲ್ಲಿಯೂ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿರುವುದು ತಿರುಪ್ಪರನ್‍ಕುಂದ್ರಂ ಪ್ರದೇಶದ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದಿದೆ.