Home ಜಿಲ್ಲೆ ಬೆಂಗಳೂರು ಟಾಕ್ಸಿಕ್ ಗಳಿಕೆ ಕುಸಿತ

ಟಾಕ್ಸಿಕ್ ಗಳಿಕೆ ಕುಸಿತ

ಬೆಂಗಳೂರು, ಆ. 30:- ಯಶ್ ಅಭಿನಯದ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಟಾಕ್ಸಿಕ್ - ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರಮಂದಿರಗಳಲ್ಲಿ ಭಾರಿ ಕುತೂಹಲದ ನಡುವೆ ತೆರೆಗೆ ಬಂದಿದೆ. ಯಾವುದೇ ದೊಡ್ಡ ಬಾಲಿವುಡ್ ಅಥವಾ ದಕ್ಷಿಣ ಭಾರತದ ಸಿನಿಮಾಗಳ ಸ್ಪರ್ಧೆಯಿಲ್ಲದೆ ಏಕಾಂಗಿಯಾಗಿ ಕಣಕ್ಕಿಳಿದಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಆರಂಭದಲ್ಲಿ ಅಭೂತಪೂರ್ವ ಅಭಿವ್ಯಕ್ತಿ ವ್ಯಕ್ತವಾಗಿತ್ತು.

ಮೊದಲ ದಿನವೇ 100 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಬಾಕ್ಸ್ ಆಫೀಸ್‍ನಲ್ಲಿ ಅಬ್ಬರದ ಖಾತೆ ತೆರೆದಿದ್ದರೂ, ಎರಡನೇ ದಿನದಿಂದಲೇ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡುಬಂದಿದ್ದು, ಈ ಇಳಿಮುಖ ಹಾದಿ ಮುಂದುವರೆದಿದೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್‍ನಿಲ್ಕ್ ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ನಾಲ್ಕನೇ ದಿನವಾದ ಶನಿವಾರದಂದು ಚಿತ್ರವು 17,612 ಪ್ರದರ್ಶನಗಳಲ್ಲಿ ಶೇಕಡಾ 24.3 ರಷ್ಟು ಆಕ್ಯುಪೆನ್ಸಿ ಕಂಡಿದ್ದು, 24.50 ಕೋಟಿ ನಿವ್ವಳ ಗಳಿಕೆ ಮಾಡಿದೆ. ಭಾಷಾವಾರು ಲೆಕ್ಕಾಚಾರದಲ್ಲಿ ಹಿಂದಿ ಆವೃತ್ತಿಯು ಶೇಕಡಾ 23 ರಷ್ಟು ಆಕ್ಯುಪೆನ್ಸಿಯೊಂದಿಗೆ 15.5 ಕೋಟಿ ಹಾಗೂ ಶೇಕಡಾ 47 ರಷ್ಟು ಆಕ್ಯುಪೆನ್ಸಿ ಪಡೆದ ಕನ್ನಡ ಆವೃತ್ತಿಯು 6.60 ಕೋಟಿ ಬಿಸಿನೆಸ್ ಮಾಡಿದೆ. ಉಳಿದಂತೆ ತೆಲುಗು 1.5 ಕೋಟಿ, ತಮಿಳು 75 ಲಕ್ಷ ಮತ್ತು ಮಲಯಾಳಂ ಆವೃತ್ತಿಯು 15 ಲಕ್ಷ ಸಂಗ್ರಹಿಸಿದೆ. ಇದರೊಂದಿಗೆ ಭಾರತದಲ್ಲಿ ನಾಲ್ಕು ದಿನಗಳ ಒಟ್ಟು ನಿವ್ವಳ ಸಂಗ್ರಹ 190.45 ಕೋಟಿ ತಲುಪಿದ್ದು, ಗ್ರೋಸ್ ಗಳಿಕೆ 227.50 ಕೋಟಿ ದಾಟಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‍ನಲ್ಲಿ 254.75 ಕೋಟಿ ಬಾಚಿಕೊಂಡಿದೆ. ಗೀತು ಮೋಹನ್‍ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರು ರಾಯಾ ಮತ್ತು ರೂಮಿ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾದ ಕ್ಲೈಮ್ಯಾಕ್ಸ್ ಕಥೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ತಂಡದಿಂದ ಯಾವುದೇ ಸುಳಿವು ಸಿಗದಿರುವುದರಿಂದ ಇದರ ಎರಡನೇ ಭಾಗ ಬರುವುದು ಅಸಂಭವ ಎನ್ನಲಾಗಿದೆ. ಈ ನಡುವೆ, ಗಳಿಕೆಯಲ್ಲಿ ಕುಸಿತ ಕಂಡರೂ ಚಿತ್ರರಂಗದಿಂದ ಟಾಕ್ಸಿಕ್’ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೆÇೀಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಯಶ್ ಪ್ರಯತ್ನವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. “ಹಿಂದಿನ ಬ್ಲಾಕ್‍ಬಸ್ಟರ್ ಸಿನಿಮಾದ ಯಶಸ್ಸಿನ ನಂತರ ಸೇಫ್ ಝೋನ್‍ನಲ್ಲಿ ಸೂತ್ರಬದ್ಧ ಸಿನಿಮಾ ಮಾಡುವ ಸುಲಭ ಹಾದಿ ತುಳಿಯದೆ, ಕಂಟೆಂಟ್ ಆಧಾರಿತ ವಿಭಿನ್ನ ಹಾಗೂ ಸಾಹಸಮಯ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ” ಎಂದು ಸುದೀಪ್ ಅವರು ಯಶ್ ಅವರ ‘ಔಟ್ ಆಫ್ ದಿ ಬಾಕ್ಸ್’ ಪ್ರಯತ್ನವನ್ನು ಮುಕ್ತಕಂಠದಿಂದ ಪ್ರಶಂಸಿಸಿ ಶುಭ ಹಾರೈಸಿದ್ದಾರೆ.