Home ಜಿಲ್ಲೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪಿ ಯಿಂದ ಎಂಜಿನಿಯರ್ಸ್ಗಳ ಸಭೆ-ವ್ಯಾಪಕ ವಿರೋಧ

ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪಿ ಯಿಂದ ಎಂಜಿನಿಯರ್ಸ್ಗಳ ಸಭೆ-ವ್ಯಾಪಕ ವಿರೋಧ

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.14 ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ್, ಅವರು ನೀರಾವರಿ ಇಲಾಖೆಯ ಎಂಜಿನಿಯರ್ಸ್ಗಳ ಸಭೆ ನಡೆಸಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಟಿ.ಬಿ.ಡ್ಯಾಂ ನ ವೈಕುಂಠ ಅತಿಥಿ ಗೃಹದಲ್ಲಿ ಗುರುವಾರ ಪಿ.ಟಿ.ಪರಮೇಶ್ವರ ನಾಯ್ಕ್, ಸಿಂಗಟಾಲೂರು ಏತ ನೀರಾವರಿ ನಿಗಮದ ಎಂಜನಿಯರ್ ಗಳ ಸಭೆ ಮಾಡಿರುವ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧ ಕಂಡು ಬಂದಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಬೇಕಾದ ಪಿ.ಟಿ.ಪಿ ಎಂಜಿನಿಯರ್ಸ್ಗಳ ಸಭೆ ನಡೆಸುವ ಮೂಲಕ  ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಗ್ಯಾರಂಟಿ ಯೋಜನೆಗಳಿಗೂ, ಸಿಂಗಟಾಲೂರು ಏತ ನೀರಾವರಿ ನಿಗಮದ ಎಂಜಿನಿಯರ್ಸ್ಗಳಿಗೆ ಎನು ಸಂಬಂಧ ಎಂದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಹಾಗೂ ವಿರೋಧ ಪಕ್ಷದವರು ಪ್ರಶ್ನೆ ಮಾಡುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಆಗಿರುವ ಪಿ.ಟಿ.ಪರಮೇಶ್ವರ ನಾಯ್ಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಸಭೆ ಮಾಡುವುದನ್ನು ಬಿಟ್ಟು ಎಂಜಿನಿಯರ್ಸ್ಗಳ ಸಭೆ ಮಾಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ.

ಮಾಜಿ ಸಚಿವರಾಗಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪಿ.ಟಿ.ಪಿ ಅವರು ಎಂಜಿನಿಯರ್ಸ್ಗಳ ಸಭೆ ನಡೆಸುವುದರ ಹಿಂದೆ ದುರುದ್ದೇಶ ಅಡಗಿದೆ. ಜಿಲ್ಲೆಯಲ್ಲಿ ಸಂಬಂಧಪಟ್ಟ ಕ್ಷೇತ್ರದ ಶಾಸಕರು, ಜಿಲ್ಲೆಯ ಸಂಸದರು ಹಾಗೂ ನೀರಾವರಿ ಸಚಿವರು ಇರುವಾಗ ತಮ್ಮ ವ್ಯಾಪ್ತಿಗೆ ಒ¼ಪಡದ ನೀರಾವರಿ ಇಲಾಖೆಯ ಎಂಜಿನಿಯರ್ಸ್ಗಳ ಸಭೆ ನಡೆಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳಿಂದ ಟೀಕೆಗಳು ಕೇಳಿ ಬರುತ್ತಿವೆ. 

ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವುದಾಗಿ ಹೇಳಿಕೊಂಡು ತಮ್ಮ ವ್ಯಾಪ್ತಿಗೆ ಒಳಪಡದ ಅಧಿಕಾರಿಗಳ ಸಭೆ ನಡೆಸುವುದು. ಹಾಗೂ ಎಸ್ಕಾರ್ಟ್ ಬಳಸುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಿಗೂ ಹಾಗೂ ಸಿಂಗಟಾಲೂರು ನೀರಾವರಿ ಇಲಾಖೆಯ ಎಂಜಿನಿಯರ್ಸ್ಗಳಿಗೂ ಎನು ಸಂಬಂಧ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ನಿಗಾವಹಿಸಬೇಕಾದ ಪಿ.ಟಿ.ಪರಮೇಶ್ವರ ನಾಯ್ಕ್, ಎಂಜಿನಿಯರ್ಸ್ಗಳ ಸಭೆ ನಡೆಸಿರುವುದು ಅಧಿಕಾರ ದುರುಪಯೋಗ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.

ಕಿಚಿಡಿ ಕೊಟ್ರೇಶ್

ಜಿಲ್ಲಾಧ್ಯಕ್ಷ

ಬಿಜೆಪಿ ಯುವ ಮೋರ್ಚಾ, ವಿಜಯನಗರ.