
ಸಂಜೆವಾಣಿ ವಾರ್ತೆ:
ಕೊಟ್ಟೂರು: ಆಗಸ್ಟ್ 13: ಕೊಟ್ಟೂರಿನ ಗ್ರಾಮ ದೇವತೆ ಊರಮ್ಮ ದೇವಿಯ ಉತ್ಸವ ನಿಮಿತ್ತ ಕಲ್ಪತರು ಕಲಾ ಟ್ರಸ್ಟ್ (ರಿ) ಹಾಗೂ ಸ್ನೇಹ ಲೋಕ ಇವೆಂಟ್ಸ್ ಕೊಟ್ಟೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಶ್ರೀ ಗುರು ಕೊಟ್ಟೂರೇಶ್ವರ ಭರತನಾಟ್ಯ ಶಾಲೆ ಕೊಟ್ಟೂರು ತಂಡದಿಂದ ಜಾನಪದ ನೃತ್ಯ ಪ್ರದರ್ಶನ ಮಾಡಲಾಯಿತು, ಹಂಸಪ್ರೀಯಾ ನೃತ್ಯ ನಿಕೇತನ ಶಿಕ್ಷಣ ಟ್ರಸ್ಟ್ ಕೊಟ್ಟೂರು ವತಿಯಿಂದ ಭರತನಾಟ್ಯ ಪ್ರದರ್ಶನ ನೆರೆದಿದ್ದವರನ್ನು ಭಕ್ತಿ ಲೋಕದಲ್ಲಿ ತೇಲಿಸಿದರು, ಸ್ನೇಹ ಲೋಕ ಇವೆಂಟ್ಸ್ ಕೊಟ್ಟೂರು ಭಕ್ತಿಗೀತೆ ನಮನ ಹಾಗೂ ರಸಮಂಜರಿ ಗೀತೆಗಳನ್ನು ಹಾಡಿದರು ವೈ ಸಿದ್ದೇಶ್ ಉಜ್ಜಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಯನ ಮಾಡಿದರು,
ಖ್ಯಾತ ಗಾಯಕಿ ಸ್ವಾತಿ ಹಾಗೂ ಪಟ್ಟಣದ ಎಸ್ ಜಾನಕಿ ಎಂದು ಪ್ರಸಿದ್ಧವಾಗಿರುವ ಶ್ರೀಮತಿ ಅಂಗಡಿ ರಾಜೇಶ್ವರಿ ನಾಗೇಶ್ ತಮ್ಮ ಸುಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಮೋಡಿ ಮಾಡುವ ಕಾರ್ಯಕ್ರಮ ಮೆರಗುತಂದಿತು.ಸೌಮ್ಯ, ಯೋಗೀಶ್ ಗೌಡ, ಲೋಕೇಶ್, ರಘು ಗಣಚಾರಿ, ಮಹೇಶ್ ಗೌಡ,ಕುಡುಕ ನನ್ನ ಮಕ್ಕಳು ಚಲನಚಿತ್ರ ಕಾರ್ಯ ನಿರ್ಮಾಪಕ ಮನಸಾಲಿ ಮುರುಳಿಧರ ಶೆಟ್ಟಿ ನೃತ್ಯ ಪ್ರದರ್ಶನ ನೀಡಿದರು, ಚಿಗಟೇರಿ ಕೊಟ್ರೇಶಿ ಅಧ್ಯಕ್ಷರು ಕಲ್ಪತರು ಕಲಾ ಟ್ರಸ್ಟ್ ಕೊಟ್ಟೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು.































