Home ಸುದ್ದಿ ರಾಷ್ಟ್ರೀಯ ಅವೆಂಜರ್ಸ್: ಎಂಡ್‍ಗೇಮ್ ಎನ್‍ಕೋರ್’ ಮರು ಬಿಡುಗಡೆ

ಅವೆಂಜರ್ಸ್: ಎಂಡ್‍ಗೇಮ್ ಎನ್‍ಕೋರ್’ ಮರು ಬಿಡುಗಡೆ

ಮಾರ್ವೆಲ್ ಸ್ಟುಡಿಯೋಸ್‍ನ ಕುತೂಹಲ ಸೃಷ್ಟಿಸಿದ್ದ ‘ಅವೆಂಜರ್ಸ್: ಎಂಡ್‍ಗೇಮ್’ ಚಿತ್ರವು ‘ಅವೆಂಜರ್ಸ್: ಎಂಡ್‍ಗೇಮ್ ಎನ್‍ಕೋರ್’ ಹೆಸರಿನಲ್ಲಿ ಭಾರತದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.


ಚಿತ್ರದ ಎರಡು ದಿನಗಳ ಗಳಿಕೆಯ ಅಂಕಿಅಂಶಗಳು ಹೊರಬಿದ್ದಿದ್ದು, ಚಿತ್ರವು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನದಂದು ಭಾರತದಲ್ಲಿ 7.25 ಕೋಟಿ ಗಳಿಸಿದ್ದ ಈ ಸಿನಿಮಾ, ಎರಡನೇ ದಿನ ಸಣ್ಣ ಏರಿಕೆ ಕಾಣುವ ಮೂಲಕ 7.65 ಕೋಟಿ ಗಳಿಸಿದೆ. ಇದರೊಂದಿಗೆ ಚಿತ್ರದ ಎರಡು ದಿನಗಳ ನಿವ್ವಳ ಸಂಗ್ರಹ 14.90 ಕೋಟಿಗೆ ತಲುಪಿದ್ದು, ಒಟ್ಟು ಸಂಗ್ರಹ 17.83 ಕೋಟಿಯಾಗಿದೆ. ಪ್ರಸ್ತುತ ಓಟವನ್ನು ಗಮನಿಸಿದರೆ ಚಿತ್ರವು 100 ಕೋಟಿ ಗಡಿಯನ್ನು ಸುಲಭವಾಗಿ ದಾಟುವ ಲಕ್ಷಣಗಳು ಕಾಣಿಸುತ್ತಿವೆ.
ಪ್ರಸ್ತುತ ಚಿತ್ರಮಂದಿರಗಳಲ್ಲಿ ‘ಹನುಮಾನ್ ಅಂಶ್’, ‘ದಿ ಪ್ಯಾರಡೈಸ್’ ಹಾಗೂ ‘ದಿ ಒನ್’ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದು, ತೀವ್ರ ಸ್ಪರ್ಧೆಯ ನಡುವೆಯೂ ‘ಅವೆಂಜರ್ಸ್ ಎನ್‍ಕೋರ್’ ತನ್ನ ಗಳಿಕೆಯನ್ನು ಕಾಯ್ದುಕೊಂಡಿದೆ.


ಈ ಮರು ಬಿಡುಗಡೆಯು ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಇತ್ತೀಚೆಗೆ ಬರೆದ ದಾಖಲೆಗೆ ಸವಾಲು ಎಸೆದಿದೆಯಾದರೂ, ಆ ದಾಖಲೆಯನ್ನು ಮುರಿಯುವುದು ಸುಲಭದ ಮಾತಲ್ಲ. ‘ಅವೆಂಜರ್ಸ್: ಎಂಡ್‍ಗೇಮ್’ ತನ್ನ ಮೊದಲ ಬಿಡುಗಡೆಯಲ್ಲಿ ಭಾರತದಲ್ಲಿ 445 ಕೋಟಿ ಗಳಿಸಿ ಪ್ರಥಮ ಸ್ಥಾನದಲ್ಲಿತ್ತು. ಆದರೆ, ನಂತರದ ದಿನಗಳಲ್ಲಿ 3ಆ ಹಾಗೂ ಇತರೆ ಫಾಮ್ರ್ಯಾಟ್‍ಗಳಲ್ಲಿ ತೆರೆಕಂಡ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಭಾರತವೊಂದರಲ್ಲೇ 642 ಕೋಟಿ ಸಂಗ್ರಹಿಸಿ ಸಾರ್ವಕಾಲಿಕ ದಾಖಲೆ ಬರೆದಿತ್ತು.
ಈ ಬೃಹತ್ ದಾಖಲೆಯನ್ನು ಮೀರಿ ನಿಲ್ಲಲು ‘ಅವೆಂಜರ್ಸ್: ಎಂಡ್‍ಗೇಮ್’ ಈ ಮರು ಬಿಡುಗಡೆಯಲ್ಲಿ ಕನಿಷ್ಠ 220 ಕೋಟಿಗೂ ಅಧಿಕ ಸಂಗ್ರಹ ಮಾಡಬೇಕಾಗಿದೆ. ಆದರೆ, ಪ್ರಸ್ತುತ ಸಿಕ್ಕಿರುವ ಆರಂಭಿಕ ಕಲೆಕ್ಷನ್ ಆಧರಿಸಿ ನೋಡಿದರೆ ಈ ಮಟ್ಟದ ಬೃಹತ್ ಮೊತ್ತವನ್ನು ತಲುಪುವುದು ಚಿತ್ರತಂಡಕ್ಕೆ ಕಠಿಣ ಸವಾಲಾಗಲಿದೆ. ಈ ಮರು ಬಿಡುಗಡೆಯು ಭಾರತದಲ್ಲಿ ಚಿತ್ರದ ಜೀವಮಾನದ ಒಟ್ಟು ಕಲೆಕ್ಷನ್‍ಗೆ ಎಷ್ಟು ಮೊತ್ತವನ್ನು ಸೇರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.