
ಸುಳ್ಯ:ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೭೮.೫ ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಪೂಜೆ ನೆರವೇರಿಸಿದರು.
ಗ್ರಾಮದ ವಿವಿಧ ರಸ್ತೆಗಳಾದ ತೊಡಿಕಾನ- ಕುಂಟುಕಾಡು ರಸ್ತೆ- ೧೫.೫ ಲಕ್ಷ, ತೊಡಿಕಾನ- ಚಿಟ್ಟನೂರು ರಸ್ತೆ ೧೦ ಲಕ್ಷ, ಬಾಳೆಕಜೆ ಹರ್ಲಡ್ಕ ರಸ್ತೆ- ೫.೫ ಲಕ್ಷ, ತೊಡಿಕಾನ ಪಾಷಾಣಮೂರ್ತಿ ಸಂಪರ್ಕ ರಸ್ತೆ -೭ಲಕ್ಷ,ನಾಗನಮೂಲೆ ಬಾಳೆಕಜೆ ರಸ್ತೆ- ೫.೫ಲಕ್ಷ ಪಂಜಿ ಕೋಡಿ ನಾಗನಮೂಲೆ ರಸ್ತೆ -೫ ಲಕ್ಷ ಕಾಡುಪಂಜ ಊರುಪಂಜ ರಸ್ತೆ- ೧೦ ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಆಗಲಿದೆ.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಆಡ್ತಲೆ, ಪ್ರಮುಖರಾದ ಭಾರತಿ ಉಳುವಾರು, ಕೃಷ್ಣಯ್ಯ ಮೂಲೆ ತೋಟ, ಸತೀಶ್ ನಾಯ್ಕ, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ್, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.


































