Home ಜಿಲ್ಲೆ ಸಹಸ್ರ ಸಾಧಕರ ಸಮಾವೇಶಕ್ಕೆ ತೆರೆ

ಸಹಸ್ರ ಸಾಧಕರ ಸಮಾವೇಶಕ್ಕೆ ತೆರೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ:ಅ,5- ಗಡಿಭಾಗದ ಹಿರೇಹಾಳ ಬಳಿಯ ಹ್ಯಾಲಿಸ್ ಬ್ಲೂ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಳೆದ ಮೂರು ದಿನಗಳಿಂದ ಜರುಗಿದ ಸಹಸ್ರ ಸಾಧಕ ಸಮಾವೇಶದ ಸಮಾರೋಪ ಸಮಾರಂಭ ನಿನ್ನೆ ಜರುಗಿತು.ಸಮಾವೇಶದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಒಂದು ಸಾವಿರದ ಎಂಟು ನೂರಾ ಐವತ್ತು ಸಾಧಕರು ಪಾಲ್ಗೊಂಡಿದ್ದರು.

ಸಮಾರೋಪದ ಕೊನೆಯ ಸಾಧನೆಯ ಅನುಷ್ಠಾನ ವನ್ನು ಬಳ್ಳಾರಿಯ ಮಾಸ್ಟರ್ ಸಿ.ವಿ.ವಿ.ರಾಜಯೋಗ ಆಶ್ರಮದ ಅಧ್ಯಕ್ಷ, ಹ್ಯಾಲೀಸ್ ಬ್ಲೂ ಕಂಪನಿಯ ಮಾಲಿಕ ಕೆ.ಎಂ.ಶಿವಮೂರ್ತಿಯವರು ನೆರವೇರಿಸಿಕೊಟ್ಟರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಾಧಕರಿಗೆ ಮಾಸ್ಟರ್ ಅವರು ವಿಶೇಷ ಭಾವಚಿತ್ರ, ಯೋಗ ಪುಸ್ತಕ,ವಿಭೂತಿ ಪ್ರಸಾದವನ್ನು ವಿತರಣೆ ಮಾಡಿದರು.ಲೋಟಸ್ ಕಮಿಟಿಯ ಎಲ್ಲಾ ಸದಸ್ಯರನ್ನು ಅಭಿನಂದನಾ ಪೂರ್ವಕವಾಗಿ ಗೌರವಿಸಲಾಯ್ತು. ಕಾರ್ಯನಿರ್ವಹಿದ ಎಲ್ಲಾ ನಾಲ್ಕು ನೂರಾ ಐವತ್ತು ಶ್ರಮಜೀವಿಗಳನ್ನು ಸನ್ಮಾಸಿದ್ದು ವಿಶೇಷವಾಗಿತ್ತು.