Home ಜಿಲ್ಲೆ ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ

ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ


ನವಲಗುAದ,ಅ.೫: ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ ಆದರೆ ಈ ಜಗದಲ್ಲಿರುವುದು ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಗಳು ಮಾತ್ರ ಎಂದು ಪಂಚಗ್ರಹ ಹಿರೇಮಠದ ಶ್ರೀ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಅಭಿಪ್ರಾಯ ಪಟ್ಟರು.


ಪಟ್ಟಣದ ಶ್ರೀ ನಾಗಲಿಂಗ ಭವನದಲ್ಲಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೋದ್ದೇಶ ಕಲ್ಯಾಣ ಸಂಘದ ತಾಲೂಕಾ ಘಟಕದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ವಧು.ವರರ ಸಮಾವೇಶ ಹಾಗೂ ನೂತನ ರಾಜ್ಯಾಧ್ಯಕ್ಷ ಹುಚ್ಚಪ್ಪ ಭೋವಿ ಅವರ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು
ವಿಜಯ ನಗರ ಸಾಮ್ರಾಜ್ಯ ಸೇರಿದಂತೆ ಅನೇಕ ಸಂಸ್ಥಾನಗಳಲ್ಲಿ ನಿಷ್ಠೆಯಿಂದ ಕಾಯಕ ಸಲಿಸುವ ಯೋಧರಾಗಿದ್ದ ಭೋವಿಗಳು ರಾಜ ಮಹಾರಾಜರು ಹಾಗೂ ಮಠಾಧೀಶರನ್ನು ಮೇಣೆ ಪಲ್ಲಕ್ಕಿಗಳಲ್ಲಿ ಹೊತ್ತುಕೊಂಡು ನಿಗದಿತ ಸ್ಥಳಗಳಿಗೆ ತಲುಪಿಸಿ ತಮ್ಮ ಜೀವದ ಹಂಗನ್ನು ತೊರೆದು ರಾಜ ಮಹಾರಾಜರನ್ನು ರಕ್ಷಿಸಿದ ನಂಬಿಗಸ್ಥ ಸಮಾಜ ಎಂಬ ಹೆಗ್ಗಳಿಕೆ ಭೋವಿ ಸಮುದಾಯಇದಾಗಿದೆ.
ಸರಕಾರ ಮೀಸಲಾತಿ ಸೌಲಭ್ಯಗಳನ್ನು ಒದಗಿಸಿದ್ದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿAದಾಗಿ ಮೀಸಲಾತಿ ಪಡೆದುಕೊಳ್ಳುವಲ್ಲಿ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತಿದ್ದು ಭೋವಿ ಜನಾಂದ ಅಭಿವೃದ್ಧಿಗೆ ಹಾಗೂ ಸಮಾಜ ನಡೆಸುವ ಹೋರಾಟಗಳಿಗೆ ಶ್ರೀ ಮಠದಿಂದ ಸದಾ ಬೆಂಬಲವಿದೆ ಎಂದರು.


ನಾಗಲಿAಗಸ್ವಾಮಿ ಮಠದ ಶ್ರೀ ವೀರಯ್ಯ ಸ್ವಾಮಿಜಿ ಮಾತನಾಡಿ ಭೋವಿ ಸಮಾಜದವರು ಮೂಲ ನಾಗಲಿಂಗಜ್ಜನ ಶಿಷ್ಯಬಳಗವಾಗಿದ್ದು ಹಿಂದುಳಿದ ಸಮಾಜವಾಗಿದ್ದು ಅಂಬೇಡ್ಕರ ಅವರ ಆಶಯದಂತೆ ಭೋವಿಗಳು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆಯಲು ಸಂಘಟಿತರಾಗಬೇಕೆAದರು.
ಕಾರ್ಯಕ್ರಮವನ್ನು ಉದ್ಷಾಟಿಸಿ ಮಾತನಾಡಿದ ಮಾಜಿ ಸಚಿವ ಕೆ.ಎನ್.ಗಡ್ಡಿ.ವಿನೋದ ಅಸೂಟಿ ಹಾಗೂ ದೇವರಾಜ ದಾಡಿಭಾವಿ ಶ್ರಮ ಜೀವಿಗಳಾದ ಭೋವಿ ಜನಾಂಗದ ಅಭಿವೃದ್ಧಿಗೆ ಬದ್ದರಾಗಿದ್ದು ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ಸಹಕಾರವನ್ನೂ ನೀಡಿ ಸಹಕರಿಸುವುದಾಗಿ ಹೇಳಿದರಲ್ಲದೇ ಹುಟ್ಟು ಹೋರಾಟಗಾರ ನವಲಗುಂದದವರಾದ ಹುಚ್ಚಪ್ಪ ಭೋವಿ ಅವರು ಸಮಾದ ಅಧ್ಯಕ್ಷರಾಗಿದ್ದು ನಮ್ಮೆಲ್ಲರ ಹೆಮ್ಮೆ ಎಂದರು.


ನಾಗಪ್ಪ ಭೋವಿ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಭೋವಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹುಚ್ಚಪ್ಪ ಭೋವಿ ಅವರವನ್ನು ಸತ್ಕರಿಸಲಾಯಿತು.
ಭೋವಿ ಸಮಾಜದ ರಾಜ್ಯ ನೌಕರರ ಸಂಘದ ಅಧ್ಯಕ್ಷ ಶಿವರಾವ್ ಭೋವಿ, ವಿ.ಟಿ.ಕರಿಸಕ್ರಣ್ಣವರ, ಸಾಯಬಣ್ಣ ಭೋವಿ, ಶೈಲೇಂದ್ರ ಭೋವಿ, ಜಗದೀಶ ಭೋವಿ, ವೆಂಕಟೇಶ ಸವಣೂರ, ಮುತ್ತಣ್ಣ ಭೋವಿ, ಸುರೇಶ ಭೋವಿ, ಹುಲಗಪ್ಪ ಭೋವಿ, ಹುಚ್ಚಪ್ಪ ಕನಕಪ್ಪನವರ, ರಾಮಣ್ಣ ಭೋವಿ, ನಾಗಪ್ಪ ಕನಕಪ್ಪನವರ, ಫಕ್ಕೀರಪ್ಪ ನಿರ್ವಾಣಿ, ಬೇಲೂರಪ್ಪ ಭೋವಿ ಸೇರಿದಂತೆ ಸಾವಿರಾರು ಭೋವಿ ಬಂಧುಗಳು ಉಪಸ್ಥಿತರಿದ್ದರು.
ಯಲ್ಲಪ್ಪ ಭೋವಿ.ವಿನಾಯಕ ಭೋವಿ ಹಾಗೂ ವಿಠಲ ಭೋವಿ ಹೆಬ್ಬಳಿ ವಧು.ವರರ ಪರಿಚರ ಕಾರ್ಯಕ್ರಮ ನಡೆಸಿಕೊಟ್ಟರು.