
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.10: ನಗರದಲ್ಲಿ ಶ್ರೀ ಮಾರುತಿ ತೊಗಲುಗೊಂಬೆ ಕಲಾಟ್ರಸ್ಟ್ ವತಿಯಿಂದ ಶ್ರಾವಣ ಸಾಂಸ್ಕೃತಿಕ ಸಂಭ್ರಮ ಆಚರಿಸಲಾಯಿತು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ದಿವ್ಯಾ ಮತ್ತು ತಂಡ ಇವರಿಂದ ಜಾನಪದ ನೃತ್ಯ ನೆರವೇರಿಸಿದರು
ಹಾಗೂ ಕುಮಾರಗೌಡ ಅಮರಾಪುರ ತಂಡ ಇವರಿಂದ ಜನಪದ ಗಾಯನ ಪ್ರಸ್ತುತಪಡಿಸಿದರು. ಎಲ್ಲಾ ವಯಸ್ಸಿನ ಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೆ ಸುಧಾ ಮತ್ತು ತಂಡದವರಿಂದ ದಾಸಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾರ್ಮೋನಿಯಂ ವಾದಕರಾದ ಶ್ರೀ ಹೆಚ್ ತಿಪ್ಪೇಸ್ವಾಮಿಯವರು ಕಲೆಗೆ ಬೆನ್ನೆಲುಬಾಗಿ ಪ್ರೋತ್ಸಾಹ ಖಂಡಿತ ಸಿಗುತ್ತದೆ ಕಲೆಯೇ ಉಸಿರಾಗಿ ಬದುಕಲು ಸಧೃಡರಾಗಬೇಕು. ಎಂದು ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ಶ್ರೀ ಪ್ರಭಾಕರ ಜೋಶಿ ಕನ್ನಡ ಉಪನ್ಯಾಸಕರು ಬಿ ಪಿ ಎಸ್ ಸಿ ಪದವಿ ಪೂರ್ವ ಕಾಲೇಜು ಬಳ್ಳಾರಿ ಇವರು ಮಕ್ಕಳು ಹಾಡಿನ ಅರ್ಥ ತಿಳಿದು ಕೊಳ್ಳಬೇಕು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಮುಂದಿನ ಪ್ರಜೆಗಳಾದ ಮಕ್ಕಳು ಉತ್ತಮ ಹವ್ಯಾಸಗಳನ್ನು ರೂಢಿಸಿ ಕೊಳ್ಳಬೇಕೆಂದು ಕಾರ್ಯಕ್ರಮನ್ನು ಉದ್ದೇಶಿಸಿ ನುಡಿದರು. ಇನ್ನೊಬ್ಬ ಅತಿಥಿಯಾಗಿ ಯುವ ಮುಖಂಡ ಟಿ ವಿನಯ್ ಕುಮಾರ್ ಭಾಗವಹಿಸಿದ್ದರು. ಹಿರಿಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿ ತಿಪ್ಪೇರುದ್ರಪ್ಪ ನಿವೃತ್ತ ಕಂದಾಯ ಅಧಿಕಾರಿಗಳು ಕರ್ನಾಟಕ ಗೃಹ ಮಂಡಳಿ, ಬಳ್ಳಾರಿ ಇವರು ಅಧ್ಯಕ್ಷತೆಯನ್ನು ವಹಿಸಿ ಮಕ್ಕಳ ಸತತ ಅಭ್ಯಾಸವೇ ಯಶಸ್ಸಿಗೆ ಸಾಧ್ಯ ಪ್ರತಿಯೊಬ್ಬರಲ್ಲಿ ಇರುವ ಸೃಜನಶೀಲತೆಯನ್ನು ಹೊರ ಚೆಲ್ಲಬೇಕು ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ (ರಿ) ಬಳ್ಳಾರಿಯ ಅಧ್ಯಕ್ಷರು ಹಾಗೂ ಸಂಸ್ಥಾಪಕರು ಸುಬ್ಬಣ್ಣ ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ತಾಂಡವ ನೃತ್ಯ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ವಿನೋದ, ಹಿರಿಯ ಬಯಲಾಟ ಕಲಾವಿದರಾದ ಹೊನ್ನೂರಸಾಬ್ ಶಂಕರಬಂಡೆ ಉಪಸ್ಥಿತರಿದ್ದರು.




























