
ಸಂಜೆವಾಣಿ ವಾರ್ತೆ
ಬಳ್ಳಾರಿ,ಮೇ.25: ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸನ್ಮಾನ್ಯ ಬಿ. ನಾಗೇಂದ್ರ ಅವರ ಸಹೋದರರು ಹಾಗೂ ಜನಪ್ರಿಯ ನಾಯಕರಾದ ಮಾನ್ಯ ಬಿ.ವೆಂಕಟೇಶ್ ಪ್ರಸಾದ್ ಅವರು ಬಳ್ಳಾರಿ ಗ್ರಾಮಾಂತರ ಪ್ರದೇಶದ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಚೆಳ್ಳಗುರ್ಕಿ ಹಾಗೂ ಮಿಂಚೇರಿ ಗ್ರಾಮಗಳಲ್ಲಿ ಸುಮಾರು 50 ಲಕ್ಷ ರೂ., ಗೋಟೂರು ಹಾಗೂ ವಣೆನೂರು ಗ್ರಾಮಗಳಲ್ಲಿ ಸುಮಾರು 170 ಲಕ್ಷ ರೂ., ಹಾಗೂ ಹೊಸ ಯರಗುಡಿ ಮತ್ತು ಮೊಕ ಗ್ರಾಮಗಳಲ್ಲಿ ಸುಮಾರು 500 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಶಾಸಕರಾದ ಬಿ. ನಾಗೇಂದ್ರ ಅವರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಗ್ರಾಮಗಳ ಅಭಿವೃದ್ಧಿಗೆ ರಸ್ತೆ ಕಾಮಗಾರಿಗಳು ಸಹಕಾರಿಯಾಗಲಿದ್ದು, ಜನರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.























