
ನವದೆಹಲಿ,ನ.20: ಭಾರತೀಯ ವಾಯುಪಡೆಯಲ್ಲಿರುವ ರಫೇಲ್ ಯುದ್ಧವಿಮಾನಗಳ ಸಕ್ರಿಯ ಸಂಖ್ಯೆ 36ರಿಂದ 32ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಜಾಗತಿಕ ವಾಯುಪಡೆಗಳ ಸಾಮಥ್ರ್ಯ ಮತ್ತು ಯುದ್ಧವಿಮಾನಗಳ ವಿವರಗಳನ್ನು ಒಳಗೊಂಡಿರುವ ಫ್ಲೈಟ್ಗ್ಲೋಬಲ್ನ 2027ರ `ವಲ್ರ್ಡ್ ಏರ್ ಫೆÇೀರ್ಸಸ್ ಡೈರೆಕ್ಟರಿ’ಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.
ಭಾರತೀಯ ವಾಯುಪಡೆಗೆ ಫ್ರಾನ್ಸ್ನಿಂದ ಒಟ್ಟು 36 ರಫೇಲ್ ಯುದ್ಧವಿಮಾನಗಳು ಲಭಿಸಿದ್ದವು. ಇದೀಗ ಅವುಗಳಲ್ಲಿ 32 ವಿಮಾನಗಳು ಮಾತ್ರ ಸಕ್ರಿಯ ಸೇವೆಯಲ್ಲಿವೆ ಎಂದು ವರದಿ ತಿಳಿಸಿದೆ. ಉಳಿದ ನಾಲ್ಕು ವಿಮಾನಗಳು ಸಕ್ರಿಯ ಪಟ್ಟಿಯಿಂದ ಹೊರಗುಳಿದಿರುವುದಕ್ಕೆ ನಿರ್ದಿಷ್ಟ ಕಾರಣವನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ.
ರಫೇಲ್ ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ಸಾಮಥ್ರ್ಯಗಳಲ್ಲಿ ಒಂದಾಗಿವೆ. ಅತ್ಯಾಧುನಿಕ ರಾಡಾರ್, ಕ್ಷಿಪಣಿ ವ್ಯವಸ್ಥೆ, ಎಲೆಕ್ಟ್ರಾನಿಕ್ ಯುದ್ಧ ಸಾಮಥ್ರ್ಯ ಹಾಗೂ ಬಹುಪಾತ್ರ ಕಾರ್ಯಾಚರಣೆಗಳ ಸಾಮಥ್ರ್ಯ ಹೊಂದಿರುವ ಈ ವಿಮಾನಗಳು ದೇಶದ ವಾಯು ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಸಕ್ರಿಯ ವಿಮಾನಗಳ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಉಳಿದ ವಿಮಾನಗಳ ಕಾರ್ಯಾಚರಣಾ ಲಭ್ಯತೆ, ನಿರ್ವಹಣೆ ಮತ್ತು ವಾಯುಪಡೆಯ ಒಟ್ಟಾರೆ ಯುದ್ಧ ಸಿದ್ಧತೆಯ ಕುರಿತು ಗಮನ ಸೆಳೆದಿದೆ.





















