Home ಜಿಲ್ಲೆ ಮೈಸೂರು 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ

73ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ

ಸಂಜೆವಾಣಿ ನ್ಯೂಸ್
ಮೈಸೂರು:ನ.20:
ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಅಂಗವಾಗಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಮಂಜೇಗೌಡ ಮಂಜೇಗೌಡ ಎಂ. ಬಿ, ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಸದಸ್ಯರು, ಠೇವಣಿದಾರರು, ಬ್ಯಾಂಕಿನ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು, ತಮ್ಮ ಭಾಷಣದಲ್ಲಿ ಅವರು ಸಹಕಾರಿ ಚಳುವಳಿಯ ಮಹತ್ವ, ಸಾಮಾನ್ಯ ಜನರ ಆರ್ಥಿಕ ಬಲವರ್ಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರವನ್ನು ವಿವರಿಸಿದರು, ಬ್ಯಾಂಕಿನ ಮೇಲಿರುವ ಗ್ರಾಹಕರ ವಿಶ್ವಾಸ ಮತ್ತು ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಅವರು ಮೆಚ್ಚಿ ಅಭಿನಂದಿಸಿದರು. ಬ್ಯಾಂಕ್ ತನ್ನ ಗ್ರಾಹಕ ಸ್ನೇಹಿ ಸೇವೆಗಳನ್ನು ಮುಂದುವರೆದುವುದರ ಜೊತೆಗೆ ಸಮಾಜದ ಆರ್ಥಿಕ ಅಭಿವೃದ್ಧಿಗೆ ಬದ್ದವಾಗಿರುವುದನ್ನು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ. ಆನಂದ. ಎಸ್, ರವರು ಹಾಗೂ ನಿರ್ಧೇಶಕರುಗಳಾದ ಶ್ರೀ. ಹನುಮಂತ, ಶ್ರೀ. ಯೋಗಾನಂದ. ಎಂ. ಬಿ, ಶ್ರೀ. ಮುತ್ತುಕುಮಾರ್. ಎಸ್, ಶ್ರೀ. ಚಂದ್ರಶೇಖರ. ಆರ್, ಶ್ರೀ. ಶಿವಶಂಕರ್, ಸಿ, ಶ್ರೀ. ಉತ್ತೇಜ್. ಎಸ್, ಶ್ರೀಮತಿ. ಶ್ವೇತಾ. ಎಸ್, ಶ್ರೀ. ಚಂದ್ರಶೇಖರ್. ಪಿ. ಶ್ರೀ. ನಂದಕುಮಾರ್. ಎನ್.ಎಸ್ ರವರುಗಳು ಮತ್ತು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ. ನಾರಾಯಣ ಎಸ್ ಜೆ, ಜನರಲ್ ಮ್ಯಾನೇಜರ್ ರವರಾದ ಶ್ರೀ. ಲಕ್ಷ್ಮೀಪ್ರಸಾದ್ ಎಂ ಸಿ ಮತ್ತು ಸದಸ್ಯರು, ಠೇವಣಿದಾರರು ಹಾಗೂ ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.