Home ಜಿಲ್ಲೆ ಮಂಗಳೂರು ರೇಂಜಾಳ ಭೂಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಿ : ಸುಂದರ ಮಾಸ್ಟರ್ ಆಗ್ರಹ

ರೇಂಜಾಳ ಭೂಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಿ : ಸುಂದರ ಮಾಸ್ಟರ್ ಆಗ್ರಹ

ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಂಜಾಳದ ಪ್ಯಾರಲ್ ಬೆಟ್ಟುವಿನ ಹೆಡ್ಮೇ ಎಂಬಲ್ಲಿ ಸುಮಾರು ಹದಿನೈದು ದಲಿತರ ಮನೆಗಳಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು ಸುಮಾರು ನಾಲ್ಕು ದಲಿತ ಮನೆಯವರನ್ನು ಸ್ಥಳಾಂತರ ಮಾಡಿದ್ದು ಅಪಾಯದ ಅಂಚಿನಲ್ಲಿವೆ.
ವಿಷಯ ತಿಳಿದಕೂಡಲೇ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯ ಒಂದು ನಿಯೋಗ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ ನೇತ್ರತ್ವದಲ್ಲಿ ಭೇಟಿಕೊಟ್ಟು ಪರಿಸ್ಥಿತಿಯ ಅವಲೋಕನ ನಡೆಸಿತು. ಇತ್ತಿಚೇಗೆ ಸುರಿದ ಭಾರಿ ಮಳೆಗೆ ದಲಿತರ ಮನೆಗಳಿರುವ ಪ್ರದೇದಲ್ಲಿ ಭಾರಿ ಗುಡ್ಡ ಬಿರುಕು ಬಿಟ್ಟು , ಗುಡ್ಡ ಕುಸಿದು ಹರಿಪ್ರಸಾದ್ ಎನ್ನುವವರ ಮನೆಯ ಸಮೀಪದ ವರೆಗೂ ಮಣ್ಣು ಕೊಚ್ಚಿಕೊಂಡು ಬಂದಿದು ಭಾರೀ ಅಪಾಯದ ಅಂಚಿನಲ್ಲಿದೆ. ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಜಿಲ್ಲಾಡಳಿತ ತುರ್ತು ರಕ್ಷಣಾ ಕಾರ್ಯವನ್ನು ಆರಂಬಿಸಿ ಕೇರಳದ ವಯ್ಯನಾಡಿನಲ್ಲಿ ಆದಂತಹ ದುರಂತ ಸಂಭವಿಸದಂತೆ ಮುಂದಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಆಗ್ರಹಿಸುತ್ತದೆ.
ಇಂದು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ನಿಯೋಗದಲ್ಲಿ ದ. ಸಂ. ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕರಾದ ಅಣ್ಣಪ್ಪ ನಕ್ರೆ , ತಾಲೂಕು ಪದಾಧಿಕಾರಿಗಳಾದ ರಾಘವ ಕುಕುಜೆ , ರಮೇಶ ವೆರ್ವಾಜೆ , ಮತ್ತಿತರರು ಇದ್ದರು.