Home Uncategorized ರಾಷ್ಟ್ರೀಯ ಅಂತರ-ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆ

ರಾಷ್ಟ್ರೀಯ ಅಂತರ-ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆ

oplus_25165826

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.25: ಮುಂದಿನ ತಿಂಗಳು ನವೆಂಬರ್ 14 ರಿಂದ 16 ರ ವರೆಗೆ ಮೂರು ದಿನಗಳ ಕಾಲ ಹೈದರಾಬಾದ್ನ ‘ವೋಕ್ಸೆನ್ ವಿಶ್ವವಿದ್ಯಾಲಯ’ದಲ್ಲಿ  ನಡೆಯಲಿರುವ 29 ನೇ ‘ರಾಷ್ಟ್ರೀಯ ಅಂತರ-ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಕೂಟ’ದಲ್ಲಿ  ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ 13 ಕ್ರೀಡಾಪಟುಗಳನ್ನು ಆಯ್ಕೆ  ಪ್ರಕ್ರಿಯೆ ಇಂದು ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯಿತು.

ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್’ ನಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು  ಚೈನಾದಲ್ಲಿ ಇತ್ತೀಚೆಗೆ ನಡೆದ  ಏಷ್ಯನ್ ಅಂಡರ್-23 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ  ಮಹಿಳೆಯರ 4×100  ಮೀಟರ್ ರಿಲೇ ನಲ್ಲಿ  ಬೆಳ್ಳಿ ಪದಕ ಗೆದ್ದ  ನಗರದ ವಿ.ಸುಧೀಕ್ಷಾ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ನಾನು ಕಳೆದ ವರ್ಷ 100 ಮೀಟರ್ ಓಟವನ್ನು 11.78 ಸೆಕೆಂಡ್ ಇತ್ತು, ಆದರೆ ಈ ವರ್ಷ  ಆ ಸಮಯವನ್ನು 11.06 ಕ್ಕೆ ಸುಧಾರಿಸಿಕೊಂಡಿದ್ದೇನೆ. ಒಲಂಪಿಕ್ ನಲ್ಲಿ ಸ್ಥಾನ ಒಡೆಯಬೇಕೆಂಬುದು ನನ್ನ ಬುಕೆಯಾಗಿದೆ.  ನನಗೆ ತುಂಬಾ ಸಂತೋಷವಿದೆ, ಏಕೆಂದರೆ ನನ್ನಲ್ಲಿ ಪ್ರಗತಿ ಕಾಣುತ್ತಿದೆ. ಖಂಡಿತವಾಗಿಯೂ ಒಂದು ದಿನ ಒಲಿಂಪಿಕ್ಸ್ನ ಆರಂಭಿಕ ಸಾಲಿನಲ್ಲಿ ನಿಲ್ಲುತ್ತೇನೆ ಮತ್ತು ಆ ಮಟ್ಟಕ್ಕೆ ನನ್ನನ್ನು ನಾನು ಸುಧಾರಿಸಿಕೊಳ್ಳುತ್ತೇನೆ ಎಂಬ ನಂಬಿಕೆ ನನಗಿದೆ ಎಂದರು.

ಬೇರೆಯವರು ಎಷ್ಟು ಮುಂದೆ ಹೋಗುತ್ತಿದ್ದಾರೆ ಎನ್ನುವುದಕ್ಕಿಂತ, ನೀವು ಹೇಗೆ ಸುಧಾರಿಸುತ್ತಿದ್ದೀರಿ ಎನ್ನುವುದರ ಮೇಲೆ ಗಮನ ಹರಿಸಿ: ಇದು ನಿಮ್ಮ ಯಶಸ್ಸಿಗೆ ಪ್ರಮುಖ ಅಂಶ ಆಗಲಿದೆಂದರು

ಅಧ್ಯಕ್ಷತೆವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಡಾ.ರವಿಶಂಕರ್ ಮಾತನಾಡಿ, ಅಸೋಸಿಯೇಷನ್ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಶಿವರಾತ್ರಿ ಓಟ ಮಾಡಿತ್ತು, ಬೇಸಿಗೆ ಕ್ರೀಡಾ  ಶಿಬಿರದಲ್ಲಿ 600 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ದಿನಾಲು 35. ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತೆ, ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು.  ಬಳ್ಳಾರಿಯ ಅನೇಕ ಕ್ರೀಡಾಪಟುಗಳು ಈಗ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಪೋಷಕರ ಬೆಂಬಲ ಮುಖ್ಯ ಜೊತೆಗೆ  ನಮ್ಮ ಅಸೋಸಿಯೇಷನ್ ಸಹ ಇದೆ. ಮಕ್ಕಳು ಸಾಧನೆಯ ಕನಸು ಕಾಣಬೇಕು ಆಗಲೇ ಯಶಸ್ಸು ಸಾಧ್ಯ ಎಂದರು.

ಡ್ರೀಂ ವರ್ಲ್ಡ ಶಾಲೆಯ ಮುಖ್ಯಸ್ಥ ಅನಿಲ್ ಬಾಬು ಮಾತನಾಡಿ, ಈ ಕ್ರೀಡಾಂಗಣದಲ್ಲಿ ರಣಜಿ ಕ್ರಿಕೆಟ್  ಪಂದ್ಯ ನಡೆದಿತ್ತು. ಈಗ ಅವೆಲ್ಲ ಇಲ್ಲ. ಈಗ ಅಥ್ಲೆಟೆಕ್ ಗೆ ಹೆಚ್ಚಿನ ಆಧ್ಯತೆ ದೊರೆಯುತ್ತಿದೆ.  ಕ್ರೀಡೆಗಳೆಂದರೆ ಆರಂಭವಾಗುವುದೇ ಅಥ್ಲೆಟಿಕ್ ನಿಂದ. ಕ್ರೀಡೆಗೆ ಶ್ರಮದ ಜೊತೆ ಆರ್ಥಿಕ ನೆರವು ಸಹ ಬೇಕು ಎಂದರು.

ಅಸೋಸಿಯೇಷನ್ ಸದಸ್ಯ. ಪಿ.ಜಗನ್ನಾಥ(ಜಗನ್)

ಕೇವಲ ಸೋಲನ್ನು ಎದಿರಿಸುವ ಧೈರ್ಯನ್ನು  ಕ್ರೀಡಿ ಕಲಿಸಲಿದೆ.  ಎಲ್ಕರೂ ಗೆಲ್ಲಲು ಸಾಧ್ಯವಿಲ್ಲ ಭಾಗವಹಿಸುವಿಕೆ ಮುಖ್ಯ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಹಾಗಬೇಕು ಎಂದರು

14 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು  ಸ್ಪಿಂಟಿಂಗ್, ಲಾಂಗ್ ಜಂಪ್, ಹೈ ಜಂಪ್, 600 ಮೀಟರ್ ಓಟ ಮತ್ತು ಬ್ಯಾಕ್  ಥ್ರೋ  ಸಂಯೋಜನೆಗಳನ್ನು ಒಳಗೊಂಡಿರುವ ಟ್ರಯಥಾನ್ ಗುಂಪುಗಳಲ್ಲಿ ಸ್ಪರ್ಧಿಸಿದರೆ. .

16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು: ವೈಯಕ್ತಿಕ ಸ್ಪರ್ಧೆಗಳು 60 ಮೀಟರ್ ಸ್ಪ್ರಿಂಟ್,, 600 ಮೀ ಓಟ, ಲಾಂಗ್ ಜಂಪ್, ಶಾಟ್ ಫುಟ್ ಮತ್ತು ಜಾವಲಿನ್ ಥ್ರೋ ನಲ್ಲಿ ಪಾಲ್ಗೊಂಡರು

ಕಾರ್ಯಕ್ರಮದಲ್ಲಿ  ಕ್ರೀಡಾ ತರಬೇತುದಾರರಾದ, ಅಸೋಸಿಯೇಷನ್ ಕಾರ್ಯದರ್ಶಿ, ಕೆ.ಎನ್ ರಾಮಸ್ವಾಮಿ, ಜಗನ್ನಾಥ ಪಿ(ಜಗನ್) ಮೆಹಬೂಬ್ ಭಾಷಾ ಪಿ, ಶ್ರೀಕಾಂತ ಕೆ, ಕೃಷ್ಣಾರೆಡ್ಡಿ ಎಸ್,  ಸುರೇಶ್, ಮೊದಲಾದವರು ಇದ್ದರು.