Home ಜಿಲ್ಲೆ ಉಚಿತ ಆರೋಗ್ಯ ತಪಾಸಣೆ

ಉಚಿತ ಆರೋಗ್ಯ ತಪಾಸಣೆ

ಲಕ್ಷೆ÷್ಮÃಶ್ವರ,ಅ೨೫: ಗ್ರಾಮೀಣ ಭಾಗದ ಬಡವರ ಕೂಲಿಕಾರ್ಮಿಕರಿಗೆ ದೀನದಲಿತರ ಜನರಿಗೆ ಉತ್ತಮ ಆರೋಗ್ಯ ಸಿಗಬೇಕು ಎಂಬ ಉದ್ದೇಶದಿಂದ ಕೆ ಎಲ್ ಇ ಆಸ್ಪತ್ರೆಯಿಂದ ಉಚಿತ ಅರೋಗ್ಯ ಶಿಬಿರಗಳನ್ನ ಹಮ್ಮಿಕೊಂಡಿದ ಎಂದು ಕೆ ಎಲ್ ಇ ಆಸ್ಪತ್ರೆ ನಿರ್ದೇಶಕ ಡಾ ಎಂ ಜಿ ಹಿರೇಮಠ ಹೇಳಿದರು.

ಅವರು ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ತೋಟದೇವರಮಠ ಆವರಣದಲ್ಲಿ ಜೆಸಿಇ ಲಕ್ಷೆ÷್ಮÃಶ್ವರ ಪುಲಿಗೇರಿ ಪ್ರಭೆ, ದಸರಾ ಉತ್ಸವ ಸಮಿತಿ ತಾಲೂಕ ವೈದ್ಯರ ಸಂಘ ಹಾಗೂ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಬಿವೃದ್ಧಿ ಸಂಘ, ಎಪಿಎಂಸಿ ವರ್ತಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ

ಗ್ರಾಮೀಣ ಬಾಗದ ಜನರಿಗೆ ಉತ್ತಮ ವೈದ್ಯಕಿಯ ಸೇವೆ ಸಿಗಬೇಕು ಎಂಬುದು ಜನರ ಕಡೆಗೆ ಹೋಗಿ ಉಚಿತ ಶಿಬಿರ ಮಾಡುವುದು ಕಾರ್ಯಕ್ರಮ ಉದ್ದೇಶವಾಗಿದೆ. ಇದರಿಂದ ಅಲ್ಲಿ ಇರುವ ಸಂಘ ಸಂಸ್ಥೆಗಳ ಸಹಾಯದಿಂದ ಉಚಿತ ಶಿಬಿರ ಮಾಡಿ ತಪಾಸಣೆ ಜೊತೆಗೆ ಉತ್ತಮ ಗುಣಮಟ್ಟದ ಔಷದೋಪಚಾರ ಆಗಬೇಕು ಎಂಬ ಉದ್ದೇಶಹೊಂದಿದೆ.
ತಪಾಸಣೆ ವೇಳೆಯಲ್ಲಿ ಹಳದಿ ಕಾರ್ಡ್ ಕೊಡುತ್ತೇವೆ ಅದನ್ನು ತಂದು ಆಸ್ಪತ್ರೆಯಲ್ಲಿ ತೋರಿಸಿದರೆ ಅಲ್ಲಿಯೂ ಉಚಿತ ಸೇವೆ ಸಿಗಲಿದೆ ಈಗಾಗಲೇ ಡಾ ಪ್ರಭಾಕರ ಕೋರೆಯವರು ಬಡವರಿಗೆ ಅನುಕೂಲ ಆಗಲೆಂದು ಆಸ್ಪತ್ರೆಯಲ್ಲಿ ೩೦೦ ಹಾಸಿಗೆಯುಳ್ಳ ವಾರ್ಡಗಳನ್ನ ಉಚಿತ ಚಿಕಿತ್ಸೆ ನೀಡಲು ತಯಾರು ಆಗಿದ್ದು ಸದ್ಯ ಅದರಲ್ಲಿ ೧೦೦ ಹಾಸಿಗೆಯುಳ್ಳ ವಾರ್ಡಗಳಲ್ಲಿ ಚಿಕಿತ್ಸೆ ಪ್ರಾರಂಭಗೊAಡಿದೆ ಅಲ್ಲಿ ಸಂಪೂರ್ಣವಾಗಿ ಉಚಿತವಿರುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೆ ಎಲ್ ಇ ಆಸ್ಪತ್ರೆ ಆಡಳಿತಾದಿಕಾರಿ ಡಾ ವೈ ಎಫ್ ಹಂಜಿ ಮಾತನಾಡಿದರು.

ಈ ಸಂದರ್ಭದಲ್ಲಿ ಜೆಸಿಐ ಪುಲಿಗೇರಿ ಪ್ರಬೆ ಅಧ್ಯಕ್ಷೆ ಲಕ್ಷಿ÷್ಮ ಹಂಗನಕಟ್ಟಿ, ದಸರಾ ಉತ್ಸವ ಸಮಿತಿಯ ಗುರುನಾಥ ದಾನಪ್ಪನವರ,ಬಸವರಾಜ ಅರಳಿ ಹಿರಿಯ ನಾಗರಿಕರ ಸಂಘದ ಸಿ ಆರ್ ಲಕ್ಕುಂಡಿಮಠ ಚಂಬಣ್ಣ ಬಾಳಿಕಾಯಿ.ಎಲ್ ಎಸ್ ಅರಳಹಳ್ಳಿ,ಡಾ ಪಿ ಡಿ ತೋಟದ,ಡಾ ಎಂ ಆರ್ ಕಲಿವಾಳಮಠ ಶಂಕರ ಬಾಳಿಕಾಯಿ, ಸೂಗಿರಪ್ಪ ವಾಲಿಶೆಟ್ಟರ, ಪ್ರಶಾಂತ ನರಸಮ್ಮನವರ, ಐ ಎಸ್ ಮಡಿವಾಳರ ಜೆ ಡಿ ಲಮಾಣಿ ವಿಜಯಕುಮಾರ ಬಿಳೆಎಲಿ, ರವಿ ಲಿಂಗಶೆಟ್ಟಿ ಪ್ರಕಾಶ ಗುತ್ತಲ ರಾಘವೇಂದ್ರ ಪೂಜಾರ,ದೇವಪ್ಪ ಗಡೆದ ಮಂಜುನಾಥ ಗದಗ ರೂಪಾ ನವಲೆ ಇದ್ದರು.