Home ಜಿಲ್ಲೆ ಇತಿಹಾಸದಲ್ಲಿ ಮಹಿಳೆಯರ ಪಾತ್ರ ಹಿರಿದು

ಇತಿಹಾಸದಲ್ಲಿ ಮಹಿಳೆಯರ ಪಾತ್ರ ಹಿರಿದು

ಚನ್ನಮ್ಮನ ಕಿತ್ತೂರ,ಅ೨೫: ಚನ್ನಮ್ಮನ ಕುರಿತಂತೆ ಅವಳ ಸಂದೇಶ ಸಾರುವಂಥ ಕಾವ್ಯ, ಲಾವಣಿ, ಕೃತಿಗಳು ಬೆಳಕಿಗೆ ಬರಲು ನಾವೆಲ್ಲರೂ ಶ್ರಮವಹಿಸಬೇಕಾಗಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿಯಿತ್ರಿ ಡಾ.ಕೆ.ಶರೀಫಾ ಹೇಳಿದರು.


ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯೋಗದಲ್ಲಿ ರಾಣಿ ಚನ್ನಮ್ಮಾ ಸಭಾಭವನದಲ್ಲಿ ನಡೆದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮದ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಇತಿಹಾಸದಲ್ಲಿ ಮಹಿಳೆಯರ ಪಾತ್ರ ಹಿರಿಯದ್ದಾಗಿದೆ. ರಾಣಿ ಚನ್ನಮ್ಮ ಸೇರಿ ಅನೇಕ ವೀರ ಮಹಿಳೆಯರು ಇತಿಹಾಸದಲ್ಲಿ ಶಾಶ್ವತವಾದ ಛಾಪು ಮೂಡಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಭಾರತಿ ಮಠದ, ಜ್ಯೋತಿ ಬದಾಮಿ, ದೀಪಿಕಾ ಚಾಟೆ, ಮಲ್ಲವ್ವ ಪಾಟೀಲ, ಡಾ. ಪಾರ್ವತಿ ಪಾಟೀಲ, ಆಶಾ ಯಮಕನಮರಡಿ, ರೇಣುಕಾ ಕಟಾರೆ, ರಾಜನಂದಾ ಗಾರ್ಗಿ, ಮೀನಾಕ್ಷಿ ಸೂಡಿ, ಭುವನೇಶ್ವರಿ ಹಿರೇಮಠ, ಗೋಪಾಯಿ ಹೈಬತ್ತಿ, ಅನಸೂಯಾ ಲಂಗೋಟಿ, ಪ್ರತಿಭಾ ಲದ್ದಿಮಠ, ಶೀಲಾ ಗಂಗಾಧರ, ಎಂ.ಕಾವ್ಯಾ, ಬಿ.ಕೆ.ಮಹಾದೇವಿ ಪಾಟೀಲ, ಚ.ಯಳ್ಳೂರ ಸೇರಿದಂತೆ ಹಲವು ಕವಿಯತ್ರಿಯರು ತಮ್ಮ ಕವನ ಹಾಗೂ ವಿಚಾರಧಾರಗಳನ್ನು ಪ್ರಸ್ತುತಪಡಿಸಿದರು. 

ಸಭೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪಾಲ್ಗೊಂಡಿದ್ದರು.  ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ ಸಾನಿಧ್ಯವಹಿಸಿದ್ದರು, ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ, ಶಾಲಾ-ಕಾಲೇಜ ವಿದ್ಯಾರ್ಥಿಗಳು ಇತರರಿದ್ದರು.