
* 720 ರೂ ಗೆ ಐದು ಕಿಲೋ
* ಕಾರ್ತಿಕ್ ಅಂಗಡಿಯಲ್ಲಿ ಮಾತ್ರ
* ಸಾಲುಗಟ್ಟಿದ ಆಂದ್ರಪ್ರದೇಶದ ರೈತರು
ಎನ್.ವೀರಭದ್ರಗೌಡ
ಬಳ್ಳಾರಿ:ಮೇ,20- ನಿನ್ನೆ ಬಿದ್ದ ಭಾರಿ ಮಳೆಗೆ ಇಳೆ ತಂಪಾಗಿದ್ದು ಮುಂಗಾರು ಹಂಗಾಮಿನ ಬಿತ್ತನೆ ಬೀಜಕ್ಕಾಗಿ ರೈತರು ಮುಗಿ ಬಿದ್ದಿದ್ದಾರೆ. ಕಳೆದ ಈ ವೇಳೆಗೆ ಮೂರು ಬಾರಿ ಮಳೆ ಬಿದ್ದತ್ತು. ಈ ಬಾರಿ ಕೊಂಚ ತಡವಾದರೂ ನಿನ್ನೆ ಬಿತ್ತನೆಗೆ ಸಹಕಾರಿಯಾಗುವ ಹದವಾದ ಮಳೆಯಾಗಿದೆ.
ಕಳೆದ ಬಾರಿ ಮುಂಗಾರಿಯಲ್ಲಿ ತೊಗರಿ ಬಿತ್ತನೆ ಮಾಡಿ ಉತ್ತಮ ಇಳುವರಿ ಮತ್ತು ಬೆಲೆ ಪಡೆದ ರೈತರು ಈ ಬಾರಿಯೂ ಅದೇ ಬಿಜಕ್ಕಾಗಿ ಮುಗಿ ಬಿದ್ದಿದ್ದಾರೆ. ತೊಗರಿಯಲ್ಲಿ ನಾನಾ ರೀತಿ, ಕಂಪನಿಗಳ ಬೀಜಗಳಿದ್ದರೂ. ನಗರದ ಕೆ.ಸಿ. ರಸ್ತೆಯ ಕಾರ್ತಿಕ್ ಆಗ್ರೋ ಸೀಡ್ಸ್ ನವರು ನೀಡುವ ಧನಲಕ್ಷ್ಮಿ ಬೀಜಕ್ಕೆ ಎಲ್ಲಿಲ್ಲದ ಬೇಡಿಕೆ. ಅದೂ ನೆರೆಯ ಆಂದ್ರಪ್ರದೇಶದ ಉರವಕೊಂಡ, ಕಣೇಕಲ್, ಗುಂತಕಲ್ಲು ಭಾಗದ ರೈತರದ್ದೇ ಹೆಚ್ಚಿನ ಬೇಡಿಕೆ. ಮಳೆಯಾಶ್ರಿತ ಜಮೀನಿನಲ್ಲಿ ಈ ತಳಿಯ ಬೀಜ ಕೊಂಚ ಮಳೆ ಕಡಿಮೆಯಾದರೂ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆಂಬುದು ಎರಗುಂಟ್ಲ ರೈತ ವೆಂಕಟ ರೆಡ್ಡಿ ಅನಿಸಿಕೆ.
ಐದು ಕಿಲೋ ಬೀಜವನ್ನು 720 ರಂತೆ ಮಾರಾಟ ಮಾಡುತ್ತಿದೆ. ಬೆಳಕರಿಯುವುದರೊಳಗೆ ಅಂಗಡಿ ಮುಂದೆ ರೈತರು ಜಮಾಯಿಸಿದ್ದರು ಬೀಜಕ್ಕಾಗಿ.
ಕಾರ್ತಿಕ್ ಅಂಗಡಿಯವರು ಸ್ವತಃ ಬಾಗಲಕೋಟೆ ಪ್ರದೇಶದಲ್ಲಿ ಬೀಜ ನೀಡಿ. ಅಲ್ಲಿ ಬೆಳೆದ ತೊಗರಿಯನ್ನು ತಂದು ಬಳ್ಳಾರಿಯಲ್ಲಿಯೇ ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಾರೆ. ಬೀಜದ ಡಿಮ್ಯಾಂಡ್ ಹೆಚ್ಚಾದಂತೆ ಬೆಲೆ ಹೆಚ್ಚಿದರೂ ಅಚ್ಚರಿ ಪಡಬೇಕಿಲ್ಲ.
ಕಳೆದ ಬಾರಿ:
ಕಳೆದ ಬಾರಿ ಈ ಬೀಜ ಬಿತ್ತನೆ ಮಾಡಿ ಎಕರೆಗೆ ಕನಿಷ್ಟ ನಾಲ್ಕರಿಂದ 11 ಕ್ವಿಂಟಲ್ ವರೆಗೆ ಬೆಳೆ ಬಂದಿತ್ತಂತೆ. ಮಾರುಕಟ್ಟೆಯಲ್ಲಿ 6500 ರೂ ನಿಂದ ಗರಿಷ್ಟ 8100 ವರೆಗೆ ಮಾರಾಟ ಆಗಿತ್ತು.





















