Home ಜಿಲ್ಲೆ ಬೈರದೇವನಹಳ್ಳಿಯಲ್ಲಿ ಮುಂಗಾರು ಜಾನಪದ ಸಂಭ್ರಮ

ಬೈರದೇವನಹಳ್ಳಿಯಲ್ಲಿ ಮುಂಗಾರು ಜಾನಪದ ಸಂಭ್ರಮ

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.11: ತಾಲೂಕಿನ ಬೈರದೇವನಹಳ್ಳಿ  ಸರ್ಕಾರಿ  ಮೊರಾರ್ಜಿವಸತಿ ಶಾಲೆಯಲ್ಲಿ ಚಿಗುರು ಕಲಾತಂಡದವರು ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮದ ಉದ್ಘಾಟನೆ ಶ್ರೀಮತಿ ಅನುಸೂಯಾ,ಕೆ, ಪ್ರಾಂಶುಪಾಲರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ರಾಮಕೋಟಿರೆಡ್ಡಿ ರವರು ವಹಿಸಿದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳು ಚಿಗುರು ಕಲಾ ತಂಡದ ಅಧ್ಯಕ್ಷರಾದ ಹುಲುಗಪ್ಪ ಎಸ್ ಎಂ  ಅವರು  ಮಾತಾನಾಡಿದ್ರು, ನಂತರ  ಶ್ರೀಮತಿ ಅನುಸೂಯಾಕೆ.ಪ್ರಾಂಶುಪಾಲರು,ರವರು, ವೇದಿಕೆ ಮೇಲಿರುವ ಎಲ್ಲಾ ಶಿಕ್ಷಕ, ಶಿಕ್ಷಕೀಯರು ಸಸಿಗೆ ನೀರಾಕುವ ಮೂಲಕ  ಕಾರ್ಯಕ್ರಮ ಉದ್ಘಾಟನೆ  ಮಾಡಿದರು. ನಂತರ ಪ್ರಾಂಶುಪಾಲರಾದಶ್ರೀಮತಿ ಅನುಸೂಯಾ,ಕೆ. ಮಾತನಾಡಿ ನಮ್ಮ ಮೂಲ ಕಲೆ ಸಾಹಿತ್ಯಗಳು ಉಳಿಸುವ ಸಲು ವಾಗಿ, ಮಾನಸಿಕ ಒತ್ತಡದಿಂದ ಹೊರಗೆ ಬರಲು ಸಾಂಸ್ಕೃತಿಕವಾಗಿ ಮಕ್ಕಳನ್ನು ತೊ ಡಗಿಸ ಬೇಕು ಎಂದು ಅವರು ಉದ್ಘಾಟನೆ ನುಡಿಗಳನ್ನು ಹೇಳಿದರು, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ  ಶ್ರೀರಾಮಕೋಟೆ ರೆಡ್ಡಿ ಸರ್ ಅವರು ಮಾತನಾಡಿ ಕಲೆ ಸಾಹಿತ್ಯ  ಮೂಲ ಕಲೆಗಳು ಉಳಿವಿಗಾಗಿ ನಾವು ಮಕ್ಕಳನ್ನ ಸೃಜನಶೀಲರಾಗಿ   ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು   ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಅಕ್ಷತಾ ಮತ್ತು ತಂಡದವರಿಂದ ಜಾನಪದ ಗೀತೆಗಳು ಕಾರ್ಯಕ್ರಮ, ಸುಂಕಪ್ಪ ಮತ್ತು ತಂಡದವರು ಜಾಗೃತಿ ಗೀತೆಗಳು, ದೀಪ್ತಿರವರಿಂದ ಜಾನಪದ ನೃತ್ಯ  ಮಾಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿಲಯದ ಎಲ್ಲಾ  ಮಕ್ಕಳಿಗೆ ಮತ್ತು ಎಲ್ಲಾ ಶಿಕ್ಷಕರಿಗೆ ಆಧುನಿಕ ಜಗತ್ತಿನಲ್ಲಿ ನಶಿಸುವ ಕಲೆಗಳನ್ನ ತಮ್ಮ ಹಾಡಿನ ಮೂಲಕ ತಮ್ಮ ಮಾತನಾಡುವ ರಂಗ ಕೌಶಲ್ಯಗಳ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಮೆರಗು ತಂದರು, ಕಾರ್ಯಕ್ರಮದಲ್ಲಿ ಕಲಾವಿದರಾದ ವಿಜಯ್, ತಮಟೆ ವಾದಕರು, ಎಚ್ ಜಿ ಸುಂಕಪ್ಪ, ಹುಲುಗಪ್ಪ ಎಸ್ಎಮ್, ರವಿಚಂದ್ರ, ಶಿಕ್ಷಕರಾದ ಶ್ರೀಯುತ ರುದ್ರಗೌಡ, ಸತೀಶ್, ಶೇಖಣ್ಣ ವಾರ್ಡನ್, ಶಿಕ್ಷಕಿಯರಾದ ಶ್ರೀಮತಿ ಆಶ್ರಯ,  ಶ್ರೀಮತಿ ವೆಂಕಟಲಕ್ಷ್ಮಿ, ಗೌರಿ ಮೇಡಂ, ಕಾರ್ಯಕ್ರಮದಲ್ಲಿ ದ್ದರು,ಆಯೋಜಕರಾದ ಹುಲುಗಪ್ಪ ಎಸ್ ಎಂ, ಅಧ್ಯಕ್ಷರು ಚಿಗುರು ಕಲಾತಂಡದವರು    ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನಂತರ ವಿಜಯರವರು  ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು,