
ಬಳ್ಳಾರಿ, ಆ.11: ನಗರದಲ್ಲಿರುವ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಗಾನಯೋಗಿ ಕಲಾಕೇಂದ್ರದಲ್ಲಿ ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳವರ 82ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ16ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿಗಾನ ನಮನ ಕಾರ್ಯಕ್ರಮ ನೆರವೇರಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀನಿವಾಸ ರೆಡ್ಡಿ ಇವರು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ನಾಡಿನ ಅನೇಕ ಸಂಗೀತ ಕಲಾವಿದರು ಬಳ್ಳಾರಿಯಲ್ಲಿ ನೆಲೆ ಕಂಡು ಸಂಗೀತವನ್ನು ಅನೇಕ ಕಲಾವಿದರಿಗೆ ಕಲಿಸುವದರ ಮೂಲಕ ಗುರುಶಿಷ್ಯರ ಪರಂಪರೆಯನ್ನು ಜೀವಂತ ವಾಗಿರಿಸಿದ್ದಾರೆ ಅಂತಹ ಕಲಾವಿದರು ಹಾಗೂ ಗುರುಗಳ ಮಾರ್ಗದಲ್ಲಿ ದೊಡ್ಡ ಬಸವಗವಾಯಿಗಳು ಕೂಡ ಒಬ್ಬರು ಇಂತಹ ಕಲಾವಿದರ ಪಡೆದ ಬಳ್ಳಾರಿ ನಗರ ಧನ್ಯ ಎಂದು ಹೇಳಿದರು ಅತಿಥಿಗಳಾಗಿ ….. ಶ್ರೀಸೋಮಶೇಖರ್ ಹೆಚ್.ತಿಪ್ಪೇಸ್ವಾಮಿ ದೊಡ್ಡ ಬಸವಗವಾಯಿ ಕುಮಾರಗೌಡ ಹೊನ್ನೂರ್ ಸಾಬ್ ಭಾಗವಹಿಸಿದ್ದರು. ಭಕ್ತಿ ಸಂಗೀತ ಸೇವೆ
ಕುಮಾರಗೌಡ ಅಮರಾಪುರ ಹೊನ್ನೂರ್ ಸಾಬ್ ಶಂಕರ ಬಂಡೆ ಇವರಿಂದ ನೆರವೇರಿತು ಸಂಗೀತ ಪಾಠಶಾಲೆ ಮಕ್ಕಳಿಂದ ಗಾನನಮನ ನಡೆಯಿತು ಟ್ರಸ್ಟ್ ಅದ್ಯಕ್ಷೆ ಕವಿತಾ ಕಗ್ಗಲ್ ಸ್ವಾಗತಿಸಿದರು. ಎಱ್ರೆಗೌಡ ಗೇಣಿಕೆ ಹಾಳು ಇವರು ನಿರೂಪಣೆ ನಡೆಸಿಕೊಟ್ಟರು




























