Home ಜಿಲ್ಲೆ ಮೈಸೂರು ಜಾಗೃತಿಯಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಹರಿಚರಣ್ ತಿಲಕ್

ಜಾಗೃತಿಯಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಹರಿಚರಣ್ ತಿಲಕ್

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.06:
ದುಶ್ಚಟ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜನರ ಚಳುವಳಿಯಾಗಬೇಕು. ಜನ ಜಾಗೃತಿಯಿಂದ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು.


ಪಟ್ಟಣದ ಕ್ರೈಸ್ತಕಿಂಗ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡಿದರು.
ತಂಬಾಕು ಸೇವನೆ, ಮದ್ಯ ಸೇವನೆ, ಡ್ರಗ್ಸ್ ಮತ್ತಿತರ ಮಾದಕ ಪದಾರ್ಥಗಳ ಸೇವನೆಯಿಂದ ನಮ್ಮ ದೈಹಿಕ ಆರೋಗ್ಯ ಹಾಳಾಗುವುದಲ್ಲದೆ ಕುಟುಂಬಗಳು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತವೆ. ಕ್ಯಾನ್ಸರ್, ಕಿಡ್ನಿ ವೈಪಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ನರ ಮತ್ತು ರಕ್ತ ನಾಳಗಳು ದುರ್ಭಲಗೊಂಡು ವ್ಯಸನಿಗಳು ಶೀಘ್ರ ಸಾವಿನ ಕಡೆಗೆ ಹೋಗುತ್ತಾರೆ. ಸಮಾಜದಲ್ಲಿ ಒಬ್ಬ ಬಿಕ್ಷುಕನಿಗಿರುವ ಬೆಲೆ ಒಬ್ಬ ಕುಡುಕನಿಗಿರುವುದಿಲ್ಲ. ವ್ಯಸನಿಗಳು ಅಕಾಲಿಕ ಮರಣ, ಅಪಘಾತ ಹಾಗೂ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ ಎಂದ ಹರಿಚರಣತಿಲಕ್ ಒಂದು ದೇಶವನ್ನು ನಾಶ ಮಾಡಲು ಮದ್ದುಗುಂಡುಗಳ ಅವಶ್ಯಕತೆಯಿಲ್ಲ. ಬದಲಾಗಿ ಅಲ್ಲಿನ ಯುವಕರಿಗೆ ದುಶ್ಚಟಗಳನ್ನು ಕಲಿಸಿಕೊಟ್ಟರೆ ಸಾಕು. ವ್ಯಸನಿಗಳಿಂದ ಕೂಡಿದ ಯುವ ಸಮಾಜವಿದ್ದರೆ ಆ ದೇಶ ತನ್ನಿಂದ ತಾನೇ ನಾಶವಾಗುತ್ತದೆಂದರು.


ಭಾರತದ ಯುವ ಶಕ್ತಿಯನ್ನು ನಾಶ ಮಾಡುವುದಕ್ಕಾಗಿಯೇ ಹಲವು ಶತ್ರು ರಾಷ್ಟ್ರಗಳು ನಮ್ಮ ದೇಶದೊಳಗೆ ಡ್ರಗ್ಸ್ ಮಾಫಿಯಾ ಸೃಷ್ಟಿಸಿವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೈಗೆ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿವೆ. ಆಳುವ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಮದ್ಯ ಮಾರಾಟದ ಅಂಗಡಿಗಳಿಗೆ ಪರವಾನಿಗೆ ಕೊಟ್ಟು ಯುವ ಜನರ ವಿನಾಶಕ್ಕೆ ಮುನ್ನುಡಿ ಬರೆಯುತ್ತಿದೆ. ಯಂಡ, ಸಾರಾಯಿ ಮಾರಾಟದಿಂದ ಬರುವ ಆಧಾಯವನ್ನೇ ನಮ್ಮ ಸರ್ಕಾರಗಳು ಪ್ರಮುಖ ಆದಾಯ ಮಾರ್ಗವನ್ನಾಗಿಸಿಕೊಳ್ಳುವ ಮೂಲಕ ಯುವ ಜನರ ವಿನಾಶಕ್ಕೆ ಮುನ್ನುಡಿ ಬರೆಯುತ್ತಿವೆ. ಆಳುವ ಸರ್ಕಾರಗಳ ಅಬಕಾರಿ ನೀತಿಯಲ್ಲಿ ಬದಲಾವಣೆಯಾಗಬೇಕು. ದುಶ್ಚಟಗಳಿಗೆ ಪ್ರೇರೇಪಿಸುವ ಪಾರ್ಟಿ ಸಂಸ್ಕೃತಿಗಳಿಗೆ ಯುವ ಜನರು ಆಕರ್ಷಿತರಾಗಬಾರದು. ಯೋಗ, ಧ್ಯಾನ, ವ್ಯಾಯಾಮ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಎಂ.ಕೆ.ಹರಿಚರಣತಿಲಕ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೆಸ್ತಕಿಂಗ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಅಂಥೋನಿಸ್ವಾಮಿ,


ಪಟ್ಟಣ ಪೆÇಲೀಸ್ ಠಾಣೆಯ ಎಎಸ್‍ಐ ಕೇಶವಮೂರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಲೀಲಾವತಿ, ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್, ಪತ್ರಕರ್ತ ಗಂಜೀಗೆರೆ ಮಹೇಶ್, ಕಾಲೇಜಿನ ಪ್ರಾಂಶುಪಾಲ ಶಿವರಾಜು, ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಲಕ್ಷ್ಮಿ ಮತ್ತಿತರರಿದ್ದು ಮಾತನಾಡಿದರು.