Home ಜಿಲ್ಲೆ ಕುರುಗೋಡು ನರ್ಸರಿ ಮಾಲೀಕನ ಕೊಲೆ ಇಬ್ಬರ ಬಂಧನ

ಕುರುಗೋಡು ನರ್ಸರಿ ಮಾಲೀಕನ ಕೊಲೆ ಇಬ್ಬರ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಸೆ,13- ಜಿಲ್ಲೆಯ  ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಯಲ್ಲಾಪುರ ಕ್ರಾಸ್, ಸಾಯಿ ಬಾಬಾ ದೇವಸ್ಥಾನದ ಹತ್ತಿರದ ರಾಮಾಂಜನೇಯ ನರ್ಸರಿ ಹತ್ತಿರ ಸೆ 6 ರಂದು ನಡೆದ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಪ್ರಮುಖ ಅಸರೋಪಿ  ತಲೆ ಮರೆಸಿಕೊಂಡಿದ್ದಾನೆ.

ನರ್ಸರಿ ಮಾಲೀಕ ಎನ್.ಉಮಾಶಂಕರ್ (38)  ಈ ತನ ಕೊಲೆ ಆಗಿತ್ತು.  ಈ ಪ್ರಕರಣದಲ್ಲಿ ಆರೋಪಿಗಳಾದ ವೇಮಪಲ್ಲಿ ನಗರ, ಪುಲವಂದಲ ತಾಲೂಕು. ಕಡಪ ಜಿಲ್ಲೆ, ಆಂಧ್ರಪ್ರದೇಶದ ಪೋಲೇಪಲ್ಲಿ ಆರುಣ್ ಕುಮಾರ್ (25)  ತಲೆ ಮರೆಸಿಕೊಂಡಿದ್ದು. ಕುರುಗೋಡಿನ ಯಲ್ಲಾಪುರ ಕ್ರಾಸ್ ವಾಸಿ    ಅಂಡಿ ಜೋಗಿ ಹನುಮಂತಪ್ಪ (30), ಬಣಗಾರ ಮಂಜುನಾಥ ತ(26) ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳಿಂದ 1 ಮಾರಕ ಆಯುಧ. 4 ಮೋಟಾರ್ ಸೈಕಲ್ಗಳು, 1 ಕಾರು ಹಾಗೂ 5 ಮೊಬೈಲ್ ಪೋನ್ ಗಳನ್ನು ಜಪ್ಪುಪಡಿಸಿಕೊಳ್ಳಲಾಗಿದೆ.

ಘಟನೆಗೆ ಕಾರಣ:

ಕೊಲೆಯಾದ ಉಮಾಶಂಕರ್ ಹಾಗೂ ಪೋಲೇಪಲ್ಲಿ ಅರುಣ್ ಕುಮಾರ್ ಇವರುಗಳ ನಡುವೆ ನರ್ಸರಿ (ಕೋಕಾಪಿಟ್) ಗೊಬ್ಬರ ವ್ಯವಹಾರ ನಡೆಯುತ್ತಿತ್ತು. ಉಮಾಶಂಕರ್ ನಿಂದ ಪೋಲೇಪಲ್ಲಿ ಅರುಣ್ ಕುಮಾರ್ ಈತನು ಸುಮಾರು 60 ಸಾವಿರ ರೂ ಮೌಲ್ಯದ ನರ್ಸರಿ (ಕೋಕಾಪಿಟ್) ಗೊಬ್ಬರವನ್ನು ಖರೀದಿಸಿ, ರೂ 50 ಸಾವಿರ  ಹಣ ನೀಡಿ, ಉಳಿದ ರೂ 10 ಸಾವಿತಲರ ಹಣ ನೀಡುವುದು ಬಾಕಿ ಇರಿಸಿಕೊಂಡಿದ್ದ. ಉಮಾಶಂಕರನು ಹಣ ಕೇಳಿದಾಗ, ಆರೋಪಿ ಅರುಣ್ ಕುಮಾರ್ ಇತರೆ ಆರೋಪಿಗಳ ಸಹಾಯ ಪಡೆದು, ಮೇಲ್ಕಂಡ ಕೃತ್ಯ ಸ್ಥಳಕ್ಕೆ ಉಮಾ ಶಂಕರ್ ನನ್ನು ಕರೆಯಿಸಿಕೊಂಡು, ಹಣಕಾಸಿನ ವ್ಯವಹಾರ, ದ್ವೇಷ ಹಿನ್ನಲೆಯಿಟ್ಟುಕೊಂಡು ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಎಸ್ಪಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.