
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.12; ಇಂದು ಸಂಜೆ 06:30 ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ರಂಗಾಯಣ, ಕಲಬುರಗಿ ವತಿಯಿಂದ ಶಾಂತರಸ ಅವರ ಕಥೆಯನ್ನಾಧರಿಸಿ ಮಹಾಂತೇಶ್ ನವಲಕಲ್ ರಚಿಸಿದ ನಾಟಕ “ಸಣ್ಣಗೌಡಸಾನಿ” ಪ್ರದರ್ಶನ ವನ್ನು ಸಂಗಂ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ರಂಗಪ್ರಿಯರು ಆಗಮಿಸಿ ವೀಕ್ಷಿಸಲು ಸಂಗಂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ.ಕೆ. ಶಿವಲಿಂಗಪ್ಪ ಹಂದಿಹಾಳು ಕೋರಿದ್ದಾರೆ.































