Home ಜಿಲ್ಲೆ ಮೈಸೂರು ಆಹಾರ ಇಲಾಖೆಯ ವಿಶೇಷ ದಾಳಿ

ಆಹಾರ ಇಲಾಖೆಯ ವಿಶೇಷ ದಾಳಿ

ಸಂಜೆವಾಣಿ ನ್ಯೂಸ್
ಮೈಸೂರು ಜೂ.24:-
ಜಿಲ್ಲಾಧಿಕಾರಿಗಳ ಸೂಚನೆಯಂತೆ ಮೈಸೂರು ನಗರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ವಿವಿಧೆಡೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿದ ಹಲವು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ದಾಳಿಯ ವಿವರ: ಆಹಾರ ಸುರಕ್ಷತಾ ಅಧಿಕಾರಿಗಳ ತಂಡವು ದಟ್ಟಗಳ್ಳಿ, ಕುವೆಂಪುನಗರ, ಸರಸ್ವತಿಪುರಂ, ಉರ್ಸ್ ರಸ್ತೆ ಹಾಗೂ ಕೊತ್ವಾಲ್ ರಾಮಯ್ಯ ಬೀದಿ ಪ್ರದೇಶಗಳಲ್ಲಿ ತಪಾಸಣೆ ನಡೆಸಿದೆ.


ಪರಿಶೀಲನೆಯ ಅಂಕಿಅಂಶಗಳು:
ಒಟ್ಟು ಪರಿಶೀಲನೆ: 23 ಆಹಾರ ವ್ಯಾಪಾರ ಸಂಸ್ಥೆಗಳು
ನೋಟಿಸ್ ಜಾರಿ: 5 ಸಂಸ್ಥೆಗಳಿಗೆ ನೋಟಿಸ್
ಅವಧಿ ಮೀರಿದ ಆಹಾರ: 3 ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ
ಮಾದರಿ ಸಂಗ್ರಹ: 6 ಮಾದರಿಗಳು 4 ಸರ್ವೇ, 2 ಕಾನೂನು ಕ್ರಮಕ್ಕಾಗಿ ಬೀದಿ ಬದಿ ವ್ಯಾಪಾರಿಗಳು ಮತ್ತು ಹೋಟೆಲ್‍ಗಳು: 15 ಸ್ಥಳಗಳಿಗೆ ಭೇಟಿ ನೀಡಿ 9 ಬೀದಿ ಬದಿ ಆಹಾರ ಮಾರಾಟಗಾರರನ್ನು ಪರಿಶೀಲಿಸಲಾಗಿದ್ದು, 4 ಮಂದಿಗೆ ನೋಟಿಸ್ ನೀಡಲಾಗಿದೆ. 4 ಬಾರ್ ಮತ್ತು ರೆಸ್ಟೋರೆಂಟ್‍ಗಳ ತಪಾಸಣೆಯಲ್ಲಿ ಒಟ್ಟು 5 ನೋಟಿಸ್ ಜಾರಿಗೊಳಿಸಲಾಗಿದೆ.


ಕಲಬೆರಕೆ ಆಹಾರ ವಶ: ಕೃತಕ ಬಣ್ಣ ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಸ್ಥಳಗಳಿಂದ ಖಾರ ಮಿಕ್ಸ್ಚರ್, ಹಸಿರು ಬಟಾಣಿ, ಕೆಂಪು ಬಟಾಣಿ ಸೇರಿ 43.5 ಕೆ.ಜಿ. ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 4,160
ಪ್ರಯೋಗಾಲಯ ಪರೀಕ್ಷೆ: ಗುಣಮಟ್ಟ ಪರಿಶೀಲನೆಗಾಗಿ 8 ಮಾದರಿಗಳನ್ನು ಸಂಗ್ರಹಿಸಲಾಗಿದೆ ? 4 ಸೂಕ್ಷ್ಮಜೀವಿ, 3 ರಾಸಾಯನಿಕ ಹಾಗೂ 1 ಲೇಬಲ್ ಪರಿಶೀಲನೆಗಾಗಿ. ಒಂದು ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಮಾದರಿ ಪಡೆಯಲಾಗಿದೆ.
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಕಾಂತರಾಜು ಎ.ಎನ್. ನೇತೃತ್ವದಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವ ಆಹಾರ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.