
ಸಂಜೆವಾಣಿ ವಾರ್ತೆ
ಹುಣಸೂರು,ಜೂ.24-ರೋಟರಿ ಕ್ಲಬ್ ಉನ್ನತ ಸಾಧನೆಗೆ 2025-26 ನೇ ಸಾಲಿಗೆ ಪ್ರತಿಷ್ಠಿತ ಡೈಮಂಡ್ ಪ್ಲಸ್ ಅವಾರ್ಡ್ ಲಭಿಸಿದ್ದು, ಈ ಮೂಲಕ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಒಂದು ವರ್ಷದ ಅವಧಿಯಲ್ಲಿ ನಗರ ಮತ್ತು ತಾಲೂಕಿನ ಅಂಗನವಾಡಿ ಕೇಂದ್ರ, ಸರಕಾರಿ ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು, ಅಕ್ಷರ, ಆರೋಗ್ಯ, ಹಸಿವಿಗೆ ಮತ್ತು ಪರಿಸರಕ್ಕೆ ರೋಟರಿಯಿಂದ ಹೆಚ್ಚು ಒತ್ತು ನೀಡಿದ್ದೇವೆ ಎಂದರು.
ಇತೀಚಿಗೆ ಮೈಸೂರಿನ ನಾರ್ತ್ ಅವೆನ್ಯೂ ಗ್ರೌಂಡ್ ಆವರಣದಲ್ಲಿ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಹುಣಸೂರು ರೋಟರಿ ಕ್ಲಬ್ ಒಂದು ವರ್ಷದ ಸಾಧನೆಗಾಗಿ ಡೈಮಂಡ್ ಪ್ಲಸ್, ಎಕ್ಸಾಲೆಂಟ್ ಅಕ್ಟೀವ್ ಕ್ಲಬ್, ವೈಬ್ರಟ್ ಕ್ಲಬ್ ಹಾಗೂ ಎಂಗೇಜ್ಮೆಂಟ್ ಎಕ್ಷಲೆನ್ಸ್ ಜಿಲ್ಲಾ ಮಟ್ಟದ ಮೂರು ಕೆಟಗೆರಿ ಅವಾರ್ಡ್ ಪಡೆಯುವ ಮೂಲಕ ಹುಣಸೂರು ರೋಟರಿ ತಾಲೂಕಿಗೆ ಹೆಮ್ಮೆ ತಂದಿದೆ ಎಂದರು.
ಈ ಸಾಧನೆಗೆ ಕಾರಣರಾದ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ, ಸಹಾಯಕ ಗವರ್ನರ್ ರಾಜೇಗೌಡ ತಿಮಲಾಪುರ, ವಲಯ ಸೇನಾನಿ ಕೆ.ರಮೇಶ್, ಹಾಗೂ ಹಿರಿಯ ರೋಟರಿ ಸದಸ್ಯರಾದ ಧರ್ಮಾಪುರ ನಾರಾಯಣ್, ರಾಜಶೇಖರ್, ಆನಂದ್ ಆರ್, ಮತ್ತು ಎಲ್ಲಾ ರೋಟರಿ ಬಂಧುಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ, ಪಿ.ಡಿ.ಜಿ ವಿಕ್ರಮ್ ದತ್ತ, ಎಲೆಕ್ಟ್ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್, ಸಹಾಯಕ ಗವರ್ನರ್ ರಾಜೇಗೌಡ ತಿರುಮಲಾಪುರ, ಆನಂದ್, ರೊಟರಿ ಕಾರ್ಯದರ್ಶಿ ಶ್ಯಾಮಣ್ಣ ರೋಟರಿಯನ್ ಡಾ. ವೃಷಬೇಂದ್ರ ಸ್ವಾಮಿ, ಡಾ.ಪ್ರಸನ್ನ, ಡಾ.ಬಸವರಾಜ್, ಧರ್ಮಾಪುರ ನಾರಾಯಣ್, ಲೂಯಿಸ್ ಪೆರೇರಾ ಚಿಲ್ಕುಂದ ಮಹೇಶ್ ಇದ್ದರು.





























