
ಸಂಜೆವಾಣಿ ನ್ಯೂಸ್
ಮೈಸೂರು ಜೂ.24:- ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪರಮಪೂಜ್ಯ ಬಾಷ್ಯಂ ಸ್ವಾಮೀಜಿ ಅವರ ಕನಸಾಗಿರುವ ರಾಜಗೋಪುರ ನಿರ್ಮಾಣ ಕಾರ್ಯ ಭಕ್ತರ ಸಹಕಾರದಿಂದ ಪ್ರಗತಿಯಲ್ಲಿದೆ.
ಕಾಮಗಾರಿಯ ಪ್ರಗತಿ: ಫೆಬ್ರವರಿ 19ರಂದು ಗುದ್ದಲಿ ಪೂಜೆಯೊಂದಿಗೆ ಆರಂಭಗೊಂಡ ಮಹತ್ವದ ಯೋಜನೆಯ *ಅಡಿಪಾಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಕಲ್ಲಿನ ಕೆಲಸ ಆರಂಭವಾಗಿದೆ. ಇಂದು ರಾಜಗೋಪುರದ ಉತ್ತರ ಕಲ್ಲನ್ನು ಬಾಷ್ಯಂ ಸ್ವಾಮೀಜಿಯವರ ಅಮೃತ ಹಸ್ತದಿಂದ ಪೂಜಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಲ್ಲಿನ ಕೆಲಸ: ಮುಂದಿನ 5 ರಿಂದ 6 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
ಮುಂದಿನ ಹಂತ: ವಿಗ್ರಹಗಳ ನಿರ್ಮಾಣ ಹಾಗೂ ಇಟ್ಟಿಗೆ-ಸಿಮೆಂಟ್ ಬಳಸಿ ಗೋಪುರ ನಿರ್ಮಾಣ
ಸಂಪೂರ್ಣ ಪೂರ್ಣ: ಸುಮಾರು 2 ರಿಂದ 3 ವರ್ಷಗಳ ಕಾಲಾವಕಾಶ
ಗೋಪುರದ ಎತ್ತರ: ಸುಮಾರು 80 ರಿಂದ 90 ಅಡಿ ನಿರ್ಮಾಣದ ಸಂಕಲ್ಪ
ಕಾರ್ಯಕ್ರಮದಲ್ಲಿ ಪರಮಪೂಜ್ಯ ಬಾಷ್ಯಂ ಸ್ವಾಮೀಜಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಲೋಕನಾಥ್ ಶ್ರೀನಿವಾಸನ್ ಗುರೂಜಿ ವಿವಿಧ ಗಣ್ಯರು, ಪ್ರಮುಖ ದಾನಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು.
ಭಕ್ತಾದಿಗಳ ಸಹಕಾರ ಹಾಗೂ ದಾನಿಗಳ ನೆರವಿನಿಂದ ಆರಂಭವಾಗಿರುವ ಈ ಯೋಜನೆ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡು, ಕುಂಭಾಭಿಷೇಕದೊಂದಿಗೆ ಸಮಾಪ್ತಿಗೊಳ್ಳಬೇಕು ಎಂದು ಪ್ರಾರ್ಥಿಸಲಾಯಿತು. ದೇವಸ್ಥಾನದ ಈ ಮಹತ್ವದ ಯೋಜನೆ ಸಮಾಜಕ್ಕೆ ಮಾದರಿಯಾಗಲಿ ಎಂದು ಭಕ್ತರು ಹಾರೈಸಿದರು.





























