
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.06: ಎರಡನೇ ಬಾರಿಗೆ ಸಚಿವರಾಗಿ ಇಂದು ಜಿಲ್ಲೆಗೆ ಆಗಮಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಬೆಂಗಳೂರಿನಿಂದ ಅನಂತಪುರಂ ಮಾರ್ಗವಾಗಿ ಚೇಳಗುರ್ಕಿ ಎರ್ರಿತಾತಾನ ಮಠಕ್ಕೆ ಆಗಮಿಸಿ ದರ್ಶನ ಪಡೆದರು.
ಆನಂತಪುರಂ ನಿಂದ ಬರುತ್ತಿದ್ದ ಅವರನ್ನು ಅವರ ಸಾವಿರಾರು ಅಭಿಮಾನಿಗಳು ಆಂಧ್ರದ ಗಡಿ ಪ್ರದೇಶದ ವಿಡುಪನ ಕಲ್ಲು ಗ್ರಾಮದಿಂದಲೇ ಬೃಹತ್ ಹೂ ಮಾಲೆಗಳನ್ನು ಹಾಕಿ ಸಿಹಿ ತಿನಿಸಿ, ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ ನೀಡಿದರು.
ಕಳೆದ ಎರೆಡು ವರ್ಷಗಳಿಂದ ಸಚಿವ ಸ್ಥಾನದಿಂದ ದೂರ ಉಳಿದಿದ್ದ ತಮ್ಮ ನಾಯಕನನ್ನು ಮತ್ತೆ ಸಚಿವರನ್ನಾಗಿ ಕಂಡು ಭಾವುಕರಾದರು. ಜಯ ಘೋಷ ಮೊಳಗಿಸಿದರು.
ದಾರಿ ಯುದ್ದಕ್ಕೂ ಬಂದು ನಿಂತಿದ್ದ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ನಾಯಕನನ್ನು ಮತ್ತೆ ಸಚಿವರನ್ನಾಗಿ ಕಂಡು ಹರ್ಷಚಿತ್ತರಾಗಿ ಪುಳಕಗೊಂಡರು.
ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮೇಯರ್ ಗಾದೆಪ್ಪ, ಪಾಲಿಕೆ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ
, ಸಿದ್ದಮ್ಮನಹಳ್ಳಿ ಹೆಚ್ ತಿಮ್ಮನಗೌಡ ಪಕ್ಷದ ಮುಖಂಡರು ಪಾಲ್ಹೊಂಡಿದ್ದರು.
































