Home ಜಿಲ್ಲೆ ಅನಾಥರಿಗೆ ಹಣ್ಣು, ಹಂಪಲು ವಿತರಣೆ

ಅನಾಥರಿಗೆ ಹಣ್ಣು, ಹಂಪಲು ವಿತರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ.11: ಕರವೇ ಬಳ್ಳಾರಿ ಜಿಲ್ಲಾಘಟಕದ ವತಿಯಿಂದಜಿಲ್ಲಾಧ್ಯಕ್ಷರಾದಅಂಗಡಿ ಶಂಕ್ರಪ್ಪಅವರ ನೇತೃತ್ವದಲ್ಲಿ, ಟಿ.ಎ. ನಾರಾಯಣಗೌಡರ 60ನೇ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದಲ್ಲಿಓ.ಪಿ.ಡಿ. ಎದುರುಗಡೆಇರುವ ಮೇರಿಮಾಥಅನಾಥಆಶ್ರಮದಲ್ಲಿಅಂದ ಮಕ್ಕಳಿಗೆ ಹಣ್ಣು-ಹಂಪಲುಗಳ ಹಂಚುವುದರ ಮೂಲಕ ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪರವರು, ಭುವನೇಶ್ವರಿ ಪುತ್ರ, ಕನ್ನಡದ ಮಣ್ಣಿನ ಮಗ ಸನ್ಮಾನ ಶ್ರೀ ಟಿ. ಎ. ನಾರಾಯಣಗೌಡಅಣ್ಣಅವರಿಗೆ ಹೃದಯಪೂರ್ವಕಜನ್ಮದಿನದ ಹಾರ್ದಿಕ ಶುಭಾಶಯ ತಿಳಿಸಿ, ಅವರಿಗೆಆರೋಗ್ಯ, ಐಶ್ವರ್ಯ ಆ ದೇವರುಇನ್ನೂ ಹೆಚ್ಚಿನರೀತಿಯಲ್ಲಿಕರುಣಿಸಲಿ, ಅವರ ನಿಮ್ಮಜೀವನವುಯಶಸ್ಸು, ಗೌರವ ಮತ್ತು ಸಂತೋಷದ ಬೆಳಕಿನಿಂದ ಸದಾ ಕಂಗೊಳಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿಜಿಲ್ಲಾಉಪಾಧ್ಯಕ್ಷರಾದ ಕೊಳೂರು ತಿಪ್ಪಾರೆಡ್ಡಿ, ಶಿವಕುಮಾರ್.ಕೆ, ಹುಬ್ಬಳಿ ರಾಜ, ಆನಂದಗೌಡ, ವಿಶ್ವನಾಥಸ್ವಾಮಿ, ತಾಲ್ಲೂಕುಅಧ್ಯಕ್ಷರಾದ ಚಾನಾಳ್ ಮಲ್ಲಿಕಾರ್ಜುನ, ಸಾಮಾಜಿಕಜಾಲತಾಣಅಧ್ಯಕ್ಷರಾದ ಶ್ರೀಧರಶೆಟ್ಟಿ ಬೆಳಗಲ್ಲು, ಮೋಕಾ ವಿಧಾನಸಭಾಉಪಾಧ್ಯಕ್ಷರಾದ ಕಂದಿ ರಾಜೇಶ್‍ರೆಡ್ಡಿ, ದುರುಗೇಶ್, ಮಹಾಂತೇಶ್ ಮಸ್ಕಿ, ಅಂಬೇಶ್‍ಗೌಡ, ಪ್ರಭುಸ್ವಾಮಿ, ಮಂಜುನಾಥಜಾನೆಕುಂಟೆ, ಹನುಮಂತ ಬೆಳಗಲ್ಲು ಮುಂತಾದವರು ಉಪಾಸ್ಥಿತರಿದ್ದರು.