
ಕಲಬುರಗಿ,ಸೆ.11:ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಎಸ್ ಸಂಕನೂರ್ ಅವರು ಮಂಗಳವಾರ (ಸೆಪ್ಟೆಂಬರ್ 8ರಂದು) ಆಳಂದ ತಾಲೂಕಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡಗಂಚಿ ಗ್ರಾಮದಲ್ಲಿ ಜೆಜೆಎಮ್ (ಎಎಒ) ಯೋಜನೆಯಡಿ ನಿರ್ಮಾಣ ಹಂತದ ಓ.ಹೆಚ್.ಟಿ. (ಔಊಖಿ) ಟ್ಯಾಂಕ್, ಕೆ.ಕೆ.ಆರ್.ಡಿ.ಬಿ. (ಏಏಖಆಃ) ಯೋಜನೆಯಡಿ ಸಮುದಾಯ ಶೌಚಾಲಯ, ತೆರೆದ ಬಾವಿ ವೀಕ್ಷಣೆ ಮಾಡಿದರು. ನಂತರ ಧನ್ನೂರ ಗ್ರಾಮದ ಹೊರವಲಯದಲ್ಲಿ ಕೂಲಿ ಕಾರ್ಮಿಕರು ಕೈಗೊಳ್ಳುತ್ತಿರುವ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಮಾತನಾಡಿ, ಎಲ್ಲರೂ ಕೂಲಿ ಕೆಲಸಕ್ಕೆ ಗೂಳೆ ಹೋಗದೆ ನಿರಂತರವಾಗಿ ತಮ್ಮ ಗ್ರಾಮಗಳಲ್ಲಿ ವಿ.ಬಿ.ಜಿ. ರಾಮ್‍ಜಿ ಯೋಜನೆಯಡಿ ವರ್ಷಕ್ಕೆ 125 ದಿನಗಳ ಕೂಲಿ ಕೆಲಸ ಮಾಡಬೇಕು. ಪ್ರತಿಯೊಬ್ಬರಿಗೂ ದಿನಕ್ಕೆ 382 ರೂ.ಗಳ ಕೂಲಿ ಮೊತ್ತ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಪರಿಶೀಲನೆ ನಡೆಸಿ, ದುತ್ತರಗಾವ್ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಪಾಠ ಮಾಡಿದರು. ನಂತರ ಸರಕಾರದಿಂದ ದೊರೆಯುತ್ತಿರುವ ಸೌಲಭ್ಯಗಳು, ಶಾಲೆಯ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟದ ಗುಣಮಟ್ಟವನ್ನು ಪರಿಶೀಲಿಸಿ ಮಾಡಿ ಸ್ಥಳದಲ್ಲಿದ್ದ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು.
ನಂತರ ಭೂಸನೂರ ಗ್ರಾಮದ ಎಸ್.ಡಬ್ಲ್ಯೂ.ಎಮ್. (SWಒ) ಶೆಡ್ ವೀಕ್ಷಿಣೆ ಮಾಡಿ ನಂತರ ಮಾಡ್ಯಾಳ್ ಗ್ರಾಮದಲ್ಲಿ ಸಮುದಾಯ ಶೌಚಾಲಯ ಹಾಗು ತಡಕಲ್ ಗ್ರಾಮದಲ್ಲಿ ಎಫ್.ಹೆಚ್.ಟಿ.ಪಿ. (ಈಊಖಿP) ಘಟಕ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.































